ನಾಪೋಕ್ಲು ಏ.11 NEWS DESK : ಅಂಜಪರವಂಡ ತಂಡದ ಆಟಗಾರರಾದ ಹೇಮಂತ್, ಅವಿನ್ ಚಿಟ್ಟಿಯಪ್ಪ ಹಾಗೂ ದೀಪಕ್ ಸುಬ್ಬಯ್ಯ ತಲಾ ಒಂದು ಗೋಲು ಗಳಿಸಿದರೆ ಅಂಜಪರವಂಡ ಚಿರಾಗ್ ಎರಡು ಗೋಲುಗಳಿಸಿ ಒಟ್ಟು ಐದು ಗೋಲುಗಳನ್ನು ದಾಖಲಿಸುವುದರ ಮೂಲಕ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಆ ಮೂಲಕ ಅಂಜಪರವಂಡ ಪಳಂಗಿಯಂಡ ವಿರುದ್ಧ ಗೆಲುವು ಸಾಧಿಸಿತು.
ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಇತರ ಪಂದ್ಯಗಳಲ್ಲಿ ಬೊಳ್ಳೆಪಂಡ ವಾಟೇರಿರ ವಿರುದ್ಧ 1-0 ರಿಂದ ಚಿರಿಯಪಂಡ ಅದೇಂಗಡ ವಿರುದ್ಧ 2-0 ರಿಂದ ಗೆಲುವು ಸಾಧಿಸಿತು.
ಮಾಚಿಮಂಡ ಬಾಚಮಂಡ ವಿರುದ್ಧ, ಕೊಂಗಂಡ ಚೊಟ್ಟೇಮಾಡ ವಿರುದ್ಧ,ಅರೆಯಡ ದೇಯಂಡ ವಿರುದ್ಧ 3-0 ಅಂತರದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು.
ಕಲಿಯಂಡ ಚೆರುವಾಳಂಡ ವಿರುದ್ಧ 4-0 ರಿಂದ ಜಯಗಳಿಸಿದರೆ ಕೇಲಪಂಡ ಅವರೇಮಾದಂಡ ವಿರುದ್ಧ 2-1 ರಿಂದ ಜಯಗಳಿಸಿತು.
ಅಮ್ಮಂಡ ಮುದ್ದಿಯಂಡ ವಿರುದ್ಧ 2-1 ರಿಂದ, ಚೇನಂಡ ನಂಬುಡಮಾಡ ವಿರುದ್ಧ 2-0 ರಿಂದ, ಕರೋಟಿರ ಕಲ್ಲಂಗಡ ವಿರುದ್ಧ 4-0 ರಿಂದ,ಮಂಡೀರ (ನೆಲಜಿ) ಕೂಪದಿರ ವಿರುದ್ಧ 1-0 ರಿಂದ,ತೀತಮಾಡ ಬೈರೇಟಿರ ವಿರುದ್ಧ 3-0 ರಿಂದ, ತಿರುತೆರ ಪುಲಿಯಂಡ ವಿರುದ್ಧ 3-0 ರಿಂದ, ಕುಟ್ಟಂಡ ಮಾಪಂಗಡ ವಿರುದ್ಧ 3-0 ರಿಂದ ಮುನ್ನಡೆ ಸಾಧಿಸಿದವು.
:: ಇಂದಿನ ಪಂದ್ಯಗಳು ::
ಮೈದಾನ 1
9 ಗಂಟೆಗೆ ಐಂಡಂಡ-ನಾಪಂಡ
10 ಗಂಟೆಗೆ ಸೋಮೆಯಂಡ-ನಿಡುಮಂಡ
11 ಗಂಟೆಗೆ ಅಜ್ಜೆಟ್ಟಿರ-ಮಾತರಂಡ
1 ಗಂಟೆಗೆ ಚೆಟ್ಟಂಗಡ-ಕಾರೇರ
2 ಗಂಟೆಗೆ ಕೊಟ್ಟಂಗಡ-ಅಚ್ಚಪಂಡ
3 ಗಂಟೆಗೆ ತೀತಿಮಾಡ-ತೆಕ್ಕಡ
3.30 ಗಂಟೆಗೆ ಬಾರಿಯಂಡ-ನಾಮೆರ
ಮೈದಾನ-2
9 ಗಂಟೆಗೆ ಚೇಂದಂಡ-ಮಂಡೆಯಡ
10 ಗಂಟೆಗೆ ಕಂಗಂಡ-ಮಾಚಮಾಡ
11 ಗಂಟೆಗೆ ಕಳ್ಳಚಂಡ-ಪೆÇಂಜಂಡ
1ಗಂಟೆಗೆ ಮಲ್ಲಜ್ಜಿರ-ಬಡ್ಡೀರ
2 ಗಂಟೆಗೆ ಅಲ್ಲಾರಂಡ-ಪಟ್ಟಚೆರುವಂಡ
3 ಗಂಟೆಗೆ ಮಲ್ಲಂಡ- ಕೊಂಗೇಟಿರ
ಮೈದಾನ-3
9.30 ಗಂಟೆಗೆ ಶಿವಚಾಳಿಯಂಡ-ಅಪ್ಪಚೆಟ್ಟೋಳಂಡ
10 ಗಂಟೆಗೆ ಮಚ್ಚಾರಂಡ-ಶಾಂತೆಯಂಡ
11 ಗಂಟೆಗೆ ಪಾಂಡಂಡ-ಕಲ್ಲಂಗಡ
1 ಗಂಟೆಗೆ ಚಂಗುಲಂಡ-ಅಲ್ಲಪಂಡ
2ಗಂಟೆ ಗೆ ತಂಬುಕುತ್ತೀರ-ಮೂಕಳೇರ
3 ಗಂಟೆಗೆ ಮುಕ್ಕಾಟಿರ (ಕುಂಜಿಲಗೇರಿ)-ಪೆಮ್ಮಂಡ
ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ಚೊಟ್ಟೆಕಮಾಡ ತಂಡದ ಪರ ಆಟವಾಡಿ ಗಮನ ಸೆಳೆದ ತಂಡದಲ್ಲಿ ಏಳು ಮಂದಿ ಹಿರಿಯ ಆಟಗಾರರು.
ವರದಿ : ದುಗ್ಗಳ ಸದಾನಂದ.






