ನಾಪೋಕ್ಲು ಏ.11 NEWS DESK : ದೊಡ್ಡಪುಲಿಕೋಟು ಗ್ರಾಮದ ಕೋಟೆ ಭಗವತಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಉತ್ಸವದ ಅಂಗವಾಗಿ ಅಂದಿ ಬೊಳಕ್, ಮಹಾಪೂಜೆ , ಎತ್ತು ಪೋರಾಟ, ಪಟ್ಟಣಿ ದೇವಿಯ ರ್ಶನ ಬಲಿ, ತರ್ಥ ಪ್ರಸಾದ ವಿತರಣೆ ಬಳಿಕ ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಕಾರ್ಯಕ್ರಮದಲ್ಲಿ ಬೊಳಕಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಬಳಿಕ ಕಾವೇರಿ ನದಿಯಲ್ಲಿ ದೇವಿಯ ಜಳಕ, ನಂತರ ದೇವಾಲಯದ ಸುತ್ತ ದೇವರ ನೃತ್ಯಬಲಿ ಜರುಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ಸಂಪನ್ನಗೊಂಡಿತು. ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ದೇವಾಲಯದ ಮುಖ್ಯ ಅರ್ಚಕ ಗೋಪಾಲಕೃಷ್ಣ ನೇತೃತ್ವದಲ್ಲಿ ನೆರವೇರಿಸಿ ಕೊಟ್ಟರು.
ಉತ್ಸವದಲ್ಲಿ ಊರ ಹಾಗೂ ಪರ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚ್ಚಿರ ತಮ್ಮಯ್ಯ, ಉಪಾಧ್ಯಕ್ಷ ಮಣವಟ್ಟಿರ ಮುದ್ದಯ್ಯ, ಮುಕ್ಕಾಟಿರ ಸುತನ್ ಸುಬ್ಬಯ್ಯ, ಕಾರ್ಯದರ್ಶಿ ಕರವಂಡ ಲವ ನಾಣಯ್ಯ, ದೇವಾಲಯದ ತಕ್ಕರಾದ ಪೆಬ್ಬಟ್ಟಿರ ಕುಶಾಲಪ್ಪ, ಕರವಂಡ ರವಿ ಬೋಪಣ್ಣ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ








