ವಿರಾಜಪೇಟೆ ಏ.11 NEWS DESK : ಬಿಟ್ಟಂಗಾಲ ಗ್ರಾಮದ ಕಂಪನಿಮೊಟ್ಟೆಯ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಾಲಯದ 32ನೇ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಎರಡು ದಿನಗಳ ಕಾಲ ನಡೆದ ಉತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಸಂಪನ್ನಗೊಂಡಿತು.
ಬೆಳಿಗ್ಗೆ ಗಣಪತಿ ಹೋಮ ಹಾಗೂ ಧ್ವಜಾರೋಹಣ ನೆರವೇರಿತು. ಸನೀಹದ ಕಣ್ಣಂಬಾಡಿ ಅಮ್ಮನ ಪೂಜೆ, ರಾತ್ರಿ ಮುತ್ತಪ್ಪನ್ ವೆಳ್ಳಾಟಂ, ಗುಳಿಗನ್ ವೆಳ್ಳಾಟಂ ಬಳಿಕ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಬಳಿಕ ವಸೂರಿಮಾಲ ತೋಟಂ ತೆರೆ ನಡೆಯಿತು.
ಗುಳಿಗನ್ ತೆರೆಯಿಂದ ದ್ವೀತಿಯ ದಿನದ ಉತ್ಸವ ಆರಂಭವಾಯಿತು. ಶ್ರೀ ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ, ವಸೂರಿಮಾಲ ತೆರೆ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆದು ಉತ್ಸವ ಕೊನೆಗೊಂಡಿತು.
ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪನ್ ದೇವಾಲಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.







