ವಿರಾಜಪೇಟೆ ಏ.11 NEWS DESK : ವಿರಾಜಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಜ್ಞಾನಗಂಗಾ ಭವನ’ದಲ್ಲಿ ಏ.12ರಿಂದ 14ರವರೆಗೆ ಚಿಣ್ಣರ ಬೇಸಿಗೆ ‘ಸಂಭ್ರಮ’ ಶಿಬಿರ ನಡೆಯಲಿದೆ ಎಂದು ಕೇಂದ್ರದ ಮುಖ್ಯ ಸಂಚಾಲಕಿ ಬಿ.ಕೆ.ಕೋಮಲ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೂರು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ 8 ರಿಂದ 15 ವರ್ಷದೊಳಗಿನ ಮಕ್ಕಳು ಭಾಗವಹಿಸಬುದಾಗಿದೆ. ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಶಿಬಿರದಲ್ಲಿ ಏರೀಬಿಕ್ ವ್ಯಾಯಾಮ, ದ್ಯಾನ, ಸ್ವಚ್ಚ ಮನಸ್ಸು, ಸ್ವಚ್ಛ ಜೀವನದಿಂದ ಸ್ವಚ್ಚ ಭಾರತ, ಗೇಮ್ಸ್, ವ್ಯಕ್ತಿತ್ವ ವಿಕಸನ, ಆಲೋಚನೆಯ ನೆಲೆ, ಏಕಾಗ್ರತೆಯ ಕಲೆ, ಭಯದ ನಿವಾರಣೆ, ಧ್ಯಾನದ ಮಹತ್ವಿಕೆ, ಕ್ರಿಯೆಯಲ್ಲಿ ಆಲೋಚನೆಗಳು, ಮೌಲ್ಯಗಳು, ಗುಂಪು ಚಟುವಟಿಕೆಗಳು, ಒಳಾಂಗಣ, ಹೊರಾಂಗಣ ಆಟೋಟಗಳು ಸೇರಿದಂತೆ ಇತರ ಚಟುವಟಿಕೆಗಳು ನಡೆಯಲಿದೆ.
ಆಸಕ್ತ ಮಕ್ಕಳು ನೊಂದಾವಣೆಗಾಗಿ 08274-256834, 8105419822 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಿದ್ದಾರೆ.








