ಸುಂಟಿಕೊಪ್ಪ,ಏ.11 NEWS DESK : ಸುಂಟಿಕೊಪ್ಪದಲ್ಲಿ ಮುಸ್ಲಿಂ ಬಾಂಧವರು ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ರಂಜಾನ್ ಈದ್‍ಉಲ್ ಪಿತ್ತರ್ ಅಂಗವಾಗಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಹೊಸ ಉಡುಪುಗಳನ್ನು ತೊಟ್ಟು ಪರಸ್ಪರ ಅಲಂಗಿಸಿಕೊಂಡು ಈದ್‍ಉಲ್ ಪಿತರ್ ಶುಭಾಶಯ ವಿನಿಮಯ ಮಾಡಿಕೊಂಡರು.
ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್‍ನಲ್ಲಿ ಮುಸ್ಲಿಯರ್ ರೌಫ್ ಸಖಾಫಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್ ಮೌಲನಾ ಜುಬೇರ್‍ಆಹ್ಮದ್, ಸುನ್ನಿ ಶಾಫಿ ಜುಮಾಮಸ್ಜಿದ್ ಧಾರ್ಮಿಕ ಮೌಲವಿ ಹಮೀದ್ ದಾರ್ಮಿ, ಮಸ್ಜಿದ್ ಮೌಲನಾ ಇನಾಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಮುಸ್ಲಿಯರ್ ಒಸಾಮ ಸಖಾಫಿ, ಅವರುಗಳು ಧಾರ್ಮಿಕ ಪ್ರವಚ ಪ್ರಾರ್ಥನೆಯನ್ನು ಸಲ್ಲಿಸಿದರು.
ಕಳೆದ 30 ದಿನಗಳ ಉಪವಾಸದ ಅಂಗವಾಗಿ ಪ್ರತಿದಿನ ರಾತ್ರಿ ಮಸೀದಿಗಳಲ್ಲಿ ಮೌಲವಿಗಳಿಂದ ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ನೆರವೇರಿತು. ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಜುಮ್ಮ ಮಸೀದಿಗಳಲ್ಲಿ ಪ್ರಾರ್ಥನೆ ಧಾರ್ಮಿಕ ಪ್ರವಚನ ನೆರವೇರಿತು. ನಂತರ ಗದ್ದೆಹಳ್ಳದ ಈದ್ಗಾದಲ್ಲಿ ಮೃತಪಟ್ಟವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು.
ಸಲಾಫಿ ಮಸೀದಿಯಲ್ಲಿ ರಂಜಾನ್ ಈದ್‍ಉಲ್ ಪಿತ್ತರ್ ಅಂಗವಾಗಿ ಆಸ್ಲಂ ಮೌಲವಿ ಗೂಡಲೂರು ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.








