
ಸುಂಟಿಕೊಪ್ಪ ಏ.16 NEWS DESK : ನಾರ್ಗಾಣೆ ಗ್ರಾಮದ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಧರ್ಮ ದೈವದ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಧರ್ಮ ದೈವಗಳ ನೇಮೋತ್ಸವ ಸಂಪನ್ನಗೊಂಡಿತು.
ಭಂಡಾರ ಮೆರವಣಿಗೆ, ಎಣ್ಣೆ ಅರ್ಪಣೆ, ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು.
ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.
ರಾತ್ರಿ ಧರ್ಮ ದೈವವಾದ ಅಣ್ಣಪ್ಪ, ಪಂಜುರ್ಲಿ ದೈವದ ನೇಮವು ನೇರವೇರಿತು. ನಂತರ ಗುಳಿಗ ಹಾಗೂ ಚಾಮುಂಡೇಶ್ವರಿ ದೈವದ ಜೋಡಿ ಕೋಲ ನಡೆಯಿತು.
ನಂತರ ಧರ್ಮ ದೈವದ ಹರಕೆ ಅರ್ಪಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರೆವೇರಿತು. ನೆರೆದಿದ್ದ ಭಕ್ತಾಧಿಗಳಿಗೆ ಇದೇ ಸಂದರ್ಭ ಅನ್ನಸಂತರ್ಪಣೆ ನೆರವರೆತು.
ಸುತ್ತ ಮುತ್ತಲ್ಲ ಗ್ರಾಮ ಹಾಗೂ ಊರುಗಳಾದ ವಿರಾಜಪೇಟೆ, ಸಿದ್ಧಾಪುರ ಕುಶಾಲನಗರ ಹಾಗೂ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ದೇವರಿಗೆ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ನಾರ್ಗಾಣೆ ಗ್ರಾಮದ ಶ್ರೀ ದೇವಿಯ ಅಣ್ಣಪ್ಪಸ್ವಾಮಿ ದೇವಾಲಯ ಪ್ರಮುಖರಾದ ಬಿ.ಡಿ.ರಾಜು ರೈ ಹಾಗೂ ಕುಟುಂಬಸ್ಥರು ಇದ್ದರು.
ದೇವಾಲಯದ ಆವರಣವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗಾರಿಸಲಾಗಿತ್ತು.







