
ಮೈಸೂರು ಏ.21 NEWS DESK : ಯದುವೀರ್ ಅವರ ಪತ್ನಿ ತ್ರಿಶಿಕಾ ಕುಮಾರಿ ಒಡೆಯರ್ ಮೈಸೂರಿನಲ್ಲಿ ಆಯೋಜಿತ ಮಹಿಳಾ ಸಶಕ್ತಿಕರಣ ಮತ್ತು ಸಮಗ್ರ ಬೆಳವಣಿಗೆಯ ಸಮಾವೇಶದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಪ್ರೋತ್ಸಾಹದಾಯಕ ನುಡಿಗಳನ್ನಾಡಿದರು. ಇದೇ ಸಂದಭ೯ ಆದಿವಾಸಿ ಮಹಿಳೆಯರ ನೖತ್ಯದಲ್ಲಿ ತಾವೂ ಹೆಜ್ಜೆ ಹಾಕಿ ಸಂಭ್ರಮಿಸಿದ ತ್ರಿಶಿಕಾ ಒಡೆಯರ್, ಮಹಿಳೆಯರಲ್ಲಿನ ಸಾಂಸ್ಕೖತಿಕ ಪ್ರತಿಭೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕೊಡಗು, ಪಿರಿಯಾಪಟ್ಟಣ, ಹುಣಸೂರು ಸೇರಿದಂತೆ ಮೈಸೂರು ವ್ಯಾಪ್ತಿಯ ಗ್ರಾಮೀಣ ಮತ್ತು ಆದಿವಾಸಿ ಮಹಿಳೆಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಕಾಯ೯ಕ್ರಮದ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು.








