


ಮಡಿಕೇರಿ ಏ.24 NEWS DESK : ಬ್ರೈನೋಬೈನ್ ಇಂಟರ್‍ನ್ಯಾಷನಲ್ ವತಿಯಿಂದ ದೆಹಲಿಯ ತ್ಯಾಗ ರಾಜ್ ಸ್ಟೇಡಿಯಂನಲ್ಲಿ ನಡೆದ 43ನೇ ರಾಷ್ಟ್ರಮಟ್ಟದ ಬ್ರೈನೋಬೈನ್ ಅಬಕಾಸ್ ಸ್ಪರ್ಧೆ-2024 ರಲ್ಲಿ ಮಡಿಕೇರಿಯ ಬ್ರೈನೋಬೈನ್ ಕೇಂದ್ರದ ನುಷ್ಕಾ ಕಾವೇರಮ್ಮ ಕೊಡಂದೇರ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾಳೆ.
ಬ್ರೈನೋಬೈನ್ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಮ್, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಅವರು ನುಷ್ಕಾಳಿಗೆ ಪದಕ ಪ್ರದಾನ ಮಾಡಿದರು.
ನುಷ್ಕಾ ಕೊಡಂದೇರ ಬ್ರೈನೋಬೈನ್ ಮಡಿಕೇರಿ ಕೇಂದ್ರದ ಮುಖ್ಯಸ್ಥರು ಹಾಗೂ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರಿಂದ ತರಬೇತಿ ಪಡೆದಿದ್ದಾಳೆ. ಮೈಸೂರಿನ ಐ ಕೇನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ 6 ವರ್ಷದ ನುಷ್ಕಾ ಕೊಡಂದೇರ ವಿಕ್ರಮ್ ಕುಟ್ಟಯ್ಯ ಹಾಗೂ ಕಾವ್ಯ ದಂಪತಿ ಪುತ್ರಿ.
ಚಾಂಪಿಯನ್ ಟ್ರೋಫಿ ಗಳಿಸಿರುವ ವಿದ್ಯಾರ್ಥಿನಿಯ ಸಾಧನೆ ಅಮೋಘ ಎಂದು ಹರ್ಷ ವ್ಯಕ್ತಪಡಿಸಿರುವ ಕವಿತಾ ಕರುಂಬಯ್ಯ ಅವರು, ವಿದ್ಯಾರ್ಥಿನಿಯ ಸಾಧನೆಯ ಹೆಗ್ಗಳಿಕೆ ಪೋಷಕರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯ 3200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.












