ಬೆಂಗಳೂರು ಮೇ 15 NEWS DESK : ಪಶ್ಚಿಮ ಘಟ್ಟಗಳಂತಹ ಕಾಡುಗಳನ್ನು ನಾಶಪಡಿಸುವ ಯೋಜನೆಗಳ ಚಿತ್ರಣವಿರುವ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ಎಂಥಾ ಕಥೆ ಮಾರಾಯ’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚೆನ್ನೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿದ್ದ ‘ಎಂಥಾ ಕಥೆ ಮಾರಾಯ’ ಸಿನಿಮಾ ಪ್ರಸ್ತುತ ಏರ್‌ಟೆಲ್ ಎಕ್ಸ್‌ಟ್ರೀಮ್, ಹಂಗಾಮಾ ಪ್ಲೇ, ಒಟಿಟಿ ಪ್ಲೇಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾ ಬೆಂಗಳೂರಿನ ಪ್ರಸಕ್ತ ನೀರಿನ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ ಮತ್ತು ಜಾಗತಿಕ ತಾಪಮಾನದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದೆ. ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರು ತಾವೇ ಬರೆದಿರುವ ‘ಕಾಡಿನ ನೆಂಟರು‘ ಕಥಾಸಂಕಲನವನ್ನು ಆಧರಿಸಿ “ಎಂಥಾ ಕಥೆ ಮಾರಾಯ” ಸಿನಿಮಾವನ್ನು ತೆರೆಗೆ ತಂದಿದ್ದಾರೆ.