ಸುಂಟಿಕೊಪ್ಪ ಮೇ 20 NEWS DESK : ದೇಶದ ಪ್ರತಿಷ್ಠಿತ ವೈದಕೀಯ ಕಾಲೇಜುಗಳಲ್ಲಿ ಒಂದಾಗಿರುವ ಮೈಸೂರು ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಪೈಕಿ ಕಾಲೇಜಿನ ಇತಿಹಾಸದಲ್ಲೇ ಅತ್ಯುನ್ನತ ಪದವಿ ಪುರಸ್ಕಾರ ಮತ್ತು ಗೌರವಗಳಿಗೆ ಪಾತ್ರರಾದ ಮೂಲತಃ ಕೊಡಗಿನವರಾದ ಲೆ.ಜ. ಡಾ.ಬಿ.ಎನ್.ಬಿ.ಎಂ. ಪ್ರಸಾದ್ ಎಸ್.ಎಂ.,ವಿ ಎಸ್.ಎಂ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಡಾ.ದಾಕ್ಷಾಯಿಣಿ ಅವರು ಇತರ ಗಣ್ಯರ ಸಮುಖದಲ್ಲಿ ಡಾ.ಪ್ರಸಾದರನ್ನು ಮೈಸೂರು ಪೇಟಾ ಶಾಲು ಫಲ ತಾಂಬೂಲ ಪ್ರಶಸ್ತಿ ಪತ್ರದೊಂದಿಗೆ ಗೌರವಿಸಿದರು.
ಡಾ.ಪ್ರಸಾದ್ ಈ ಕಾಲೇಜಿನಿಂದ 1977 ರಲ್ಲಿ ವೈಧ್ಯರಾಗಿ ಹೊರಹೊಮ್ಮಿ ಭಾರತೀಯ ಭೂಸೇನೆಯನ್ನು ಸೇರಿದರು ಸೇನೆಯಲ್ಲಿ ವಿವಿಧ ಜವಬ್ಧಾರಿಗಳೊಂದಿಗೆ ಹಂತ ಹಂತವಾಗಿ ಪದನ್ನೋತ್ತಿ ಹೊಂದಿ ಅವರು ಭಾರತೀಯ ರಕ್ಷಣಾ ಪಡೆಗಳ ವೈದಕೀಯ ವಿಭಾಗದ ಮಹಾ ನಿರ್ದೇಶಕರಾಗಿ ಮುಖ್ಯ ಸಮಲೋಚಕರಾಗಿ ಜೋತೆಗೆ ಭಾರತ ರಾಷ್ಟ್ರಪತಿಗಳ ಗೌರವ ಸರ್ಜನ್ ಆಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ರಾಷ್ಟ್ರಮಟ್ಟದ ಪ್ರಶಸ್ತಿ ಮತ್ತು ಗೌರವ ಪದವಿಗಳಿಗೆ ಪಾತ್ರರಾಗಿರುವ ಡಾ.ಪ್ರಸಾದ್ ತಮ್ಮ ನಿವೃತ್ತಿಯ ನಂತರ ಉತ್ತರ ಪ್ರದೇಶದ ವೈದಕೀಯ ಶಿಕ್ಷಣ ಇಲಾಖೆಯ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ಹಿರಿಯ ತಜ್ಞವೈಧ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಪ್ರಸಾದ್ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ನಾರಾಯಣ್‍ಭಟ್ ಮತ್ತು ಲಕ್ಷ್ಮಮ್ಮ ದಂಪತಿಗಳ ಪುತ್ರ.