ಮಡಿಕೇರಿ ಮೇ 21 NEWS DESK : ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಮುಕ್ತ ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಿತು.
ವಿವಿಧ ವಿಭಾಗಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುಮಾರು 120ಕ್ಕೂ ಹೆಚ್ಚಿನ ಆಟಗಾರರು ಭಾಗವಹಿಸಿದ್ದರು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯ ಮಹಾ ವಿದ್ಯಾನಿಲಯದ ಡೀನ್ ಡಾ.ಜಿ.ಎಂ.ದೇವಗಿರಿ, ವಿದ್ಯಾರ್ಥಿಗಳಿಗೆ ಶುಭಕೋರಿ ಪಂದ್ಯಾವಳಿಯ ಸೋಲು ಗೆಲುವು ಮುಖ್ಯ ಎಲ್ಲವನ್ನು ಸಮಾನವಾಗಿ ಸ್ವೀಕರಿಸಿ ಉನ್ನತ ಸ್ಥಾನಕ್ಕೆ ಏರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಭಾರತ ಹಾಕಿ ಕ್ರೀಡಾಪಟು ಕೆ.ಟಿ.ಮೋಹನ್, ಉಪಸ್ಥಿತರಿದ್ದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಧ್ಯಾಪಕರಾದ ಡಾ.ರಾಮಕೃಷ್ಣ ಹೆಗ್ಡೆ, ಡಾ.ಮಹೇಶರಪ್ಪ, ಗ್ರಂಥಪಾಲಕರಾದ ಸುಬ್ರಮಣಿ, ಪೊನ್ನಂಪೇಟೆ ಚುನಾವಣಾಧಿಕಾರಿ ಮಹೇಶ್ ಹೊಳ್ಳ, ಕೊಡಗು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ನ ಗೌರವಾಧ್ಯಕ್ಷ ವಿ.ಎಸ್.ಮೊಹಮ್ಮದ್ ಅಸೀಫ್ ಮತ್ತು ಪಿ.ಎಲ್.ಮಂಜುನಾಥ್, ಕೆ.ಎನ್.ಪ್ರವೀಣ್‍ಶೇಟ್ ಹಾಜರಿದ್ದರು, ವಿಜೇತರಿಗೆ ಬಹುಮಾನ ವಿತರಿಸಿದರು.
ವಿಜೇತರ ವಿವರ : ಯು-10 ಬಾಲಕರ ವಿಭಾಗದಲ್ಲಿ ಚಿರಂಜೀವಿ ಪ್ರಥಮ, ದರ್ಶನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಕೆ.ಲಿಪಿಕಾ ಪ್ರಥಮ, ಲಾವಣ್ಯ ದ್ವಿತೀಯ, ಯು-15 ಬಾಲಕರ ವಿಭಾಗದಲ್ಲಿ ಕೆ.ಲಿತೇಶ್ ಪ್ರಥಮ, ಅವನೀಶ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸಿಂಚನಾ ಪ್ರಥಮ, ಲೋಚನಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಯು-18 ಯುವಕರ ವಿಭಾಗದಲ್ಲಿ ಸಹದೆ ಶಬೀರ್ ಪ್ರಥಮ, ಕೆ.ಲಿತೇಶ್ ದ್ವಿತೀಯ, ಯು-25 ಯುವಕರ ವಿಭಾಗದಲ್ಲಿ ಕೆ.ಲಿತೇಶ್ ಪ್ರಥಮ, ಅದೀಬ್ ವಸೀಂ ದ್ವಿತೀಯ, ವಿದ್ಯಾರ್ಥಿನಿಯರ ವಿಭಾಗದಲ್ಲಿ ರಕ್ಷಿತಾ ಪ್ರಥಮ, ಸಿಂಚನಾ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಮುಕ್ತ ವಿಭಾಗದಲ್ಲಿ ರಚನ್ ಪೊನ್ನಪ್ಪ ಪ್ರಥಮ, ಕೆ.ಎ.ಈಶ್ವರ್ ದ್ವಿತೀಯ, ಮುಕ್ತ ಡಬಲ್ಸ್ ಪುರುಷರ ವಿಭಾಗದಲ್ಲಿ ರಚನ್ ಪೊನ್ನಪ್ಪ ಮತ್ತು ಡೆರಿಕ್ ಪ್ರಥಮ, ಮಂಜುನಾಥ್ ಮತ್ತು ವರುಣ್ ಸುಧಾಕರ ದ್ವಿತೀಯ, ಮಿಕ್ಸ್‍ಡ್ ಡಬಲ್ಸ್‍ನಲ್ಲಿ ಈಶ್ವರ ಮತ್ತು ರಕ್ಷಿತಾ ಪ್ರಥಮ, ರಚನ್ ಪೊನ್ನಪ್ಪ ಮತ್ತು ನಮಿತಾ ದ್ವಿತೀಯ, ಮಹಿಳೆಯರ ಮುಕ್ತ ಡಬಲ್ಸ್‍ನಲ್ಲಿ ತಂಗಮ್ಮ ಮತ್ತು ರೀತ್ ಗಣಪತಿ ಪ್ರಥಮ, ನಮಿತಾ ಮತ್ತು ಮಾನಾಸ ದ್ವಿತೀಯ, 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರವೀಣ್ ಶೇಟ್ ಪ್ರಥಮ, ಮಹಮ್ಮದ್ ಅನಿಫ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಈ ಪಂದ್ಯಾವಳಿಯನ್ನು ಅರಣ್ಯ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಎ.ಈಶ್ವರ್ ಆಯೋಜಿಸಿದರು.