ನಾಪೋಕ್ಲು ಮೇ 24 NEWS DESK : ಬಲ್ಲಮಾವಟಿ ಗ್ರಾಮದ ರಾಟೆ ಶ್ರೀ ಭಗವತಿ ದೇವರ ಉತ್ಸವವು ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಿಗ್ಗೆ ಎಡಿಕೇರಿ ದೊಡ್ಡ ಮನೆಯಿಂದ ಭಂಡಾರ ತಂದು ದೇವಾಲಯದಲ್ಲಿ ಇರಿಸಿ ತಂಡ್ರ ಹೊಳೆಯಲ್ಲಿ ಜಳಕ ನೆರವೇರಿಸಿದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿತು.
ಪೀಲಿಯಾಟ್ ಹಾಗೂ ಬೋಡ್ ನಮ್ಮೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ವಿಶೇಷ ವೇಷಧರಿಸಿ ದೇವರ ಉತ್ಸವದಲ್ಲಿ ಕುಣಿದು ಸಾಂಪ್ರದಾಯಿಕ ಆಚರಣೆ ನೆರವೇರಿಸಿದರು.
ಬೊಡ್ ನಮ್ಮೆ ಉತ್ಸವದಲ್ಲಿ ತಕ್ಕ ಮುಖ್ಯಸ್ಥರು, ನಾಡಿನ ಭಕ್ತರು, ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಉತ್ಸವದ ಅಂಗವಾಗಿ ಆರಾಟ್ ಬೊಳಕಾಟ್ ನಡೆಯಿತು.
ಮಹಾಪೂಜೆ ಬಳಿಕ ದೇವರನ್ನು ರಾಟೆಯಲ್ಲಿ ಕೂರಿಸಿ ಸಂಪ್ರದಾಯಿಕವಾಗಿ ತೂಗಲಾಯಿತು. ಸಂಜೆ ಕ್ಷೇತ್ರಪಾಲ, ಶಾಸ್ತಾವು ಹಾಗೂ ಭದ್ರಕಾಳಿ ತೆರೆಗಳು ನಡೆಯಲಿವೆ.
ವರದಿ : ದುಗ್ಗಳ ಸದಾನಂದ.