ಮಡಿಕೇರಿ ಜೂ.1 NEWS DESK : ಮಾನವೀಯ ಸ್ನೇಹಿತರ ಒಕ್ಕೂಟದ ಸದಸ್ಯರ ಸಮ್ಮಿಲನ ಕಾರ್ಯಕ್ರಮವು ಜೂ.2 ರಂದು ನಡೆಯಲಿದೆ.
ಬೆಳಿಗ್ಗೆ 10.30 ಗಂಟೆಗೆ ನಗರದ ಕ್ರೆಸೆಂಟ್ ಶಾಲೆಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಒಕ್ಕೂಟದ ಅಡ್ಮಿನ್ ನಿವೃತ್ತ ಸುಬೇದಾರ್, ಮೇಜರ್, ಹಾನರರಿ ಕ್ಯಾಪ್ಟನ್ ಡೇವಿಡ್ ವೇಗಸ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಹಿರಿಯ ಅಡ್ಮಿನ್ ಎಂ.ಇ.ಮಹಮದ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಮೈಕಲ್ ವೇಗಸ್, ಗಾಯತ್ರಿ ನರಸಿಂಹ, ಒಕ್ಕೂಟದ ಪ್ರತಿನಿಧಿ ತೋರೇರ ಅಪ್ಪಿ ಪೂವಣ್ಣ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಪ್ರಧಾನ ಆಯುಕ್ತ ಹಾಗೂ ಒಕ್ಕೂಟದ ಪ್ರತಿನಿಧಿಗಳಾದ ಬೇಬಿ ಮ್ಯಾಥ್ಯೂ, ವಾಮನ ಟೀಚರ್, ಬಲ್ಲಮಾವಟಿ ನೇತಾಜಿ ಅನುದಾನಿತ ಪ್ರೌಢಶಾಲೆಯ ಶಿಕ್ಷಕ ಮೆಹಬೂಬ್ ಮಾಸ್ಟರ್, ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಹಾಕತ್ತೂರು, ಚೆನ್ನಯ್ಯನ ಕೋಟೆ, ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ಶಿವಪ್ಪ, ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ನಿಯಾಝ್ ಸುಂಟಿಕೊಪ್ಪ ಪಾಲ್ಗೊಳ್ಳಲಿದ್ದಾರೆ.
ಒಕ್ಕೂಟದ ಪ್ರತಿನಿಧಿ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿಮೋಹನ್ ಧ್ಯೇಯ ಗೀತೆಯನ್ನು ಹಾಡಲಿದ್ದು, ಪಾಲಿಬೆಟ್ಟದ ವಾಡನ್ ಎಸ್ಟೇಟ್‍ನ ವ್ಯವಸ್ಥಾಪಕರು ಹಾಗೂ ಒಕ್ಕೂಟದ ಅಡ್ಮಿನ್ ಶಶಿ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಲೀನಾ ಅಶ್ರಫ್ ವರದಿ ವಾಚನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಒಕ್ಕೂಟದ ಮುಂದಿನ ಯೋಜನೆ ಕುರಿತು ಚರ್ಚೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.