ಮಾದಾಪುರ ಜೂ.4 NEWS DESK : ಹಟ್ಟಿಹೊಳೆಯಲ್ಲಿ ನಡೆದ ಮೊದಲನೇ ವರ್ಷದ ಹಟ್ಟಿಹೊಳೆ ಕ್ರಿಕೆಟ್ ಲೀಗ್‍ನಲ್ಲಿ ಟೀಮ್ ರ್ಯಾಬಿಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಹಟ್ಟಿ ಕ್ರಿಕೆಟರ್ಸ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಐದು ಓವರ್‌ಗಳ ಈ ಕ್ರಿಕೆಟ್ ಪಂದ್ಯಾಟದಲ್ಲಿ ಟಾಸ್ ಗೆದ್ದ ಟೀಮ್ ರ್ಯಾಬಿಟ್ ತಂಡ ಬೌಲಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟ್ ಮಾಡಿದ ಹಟ್ಟಿ ಕ್ರಿಕೇಟರ್ಸ್ ಐದು ಓವರ್ ಗಳಲ್ಲಿ ಕೇವಲ 26 ರನ್ ಗಳಿಸಲಷ್ಟೇ ಸಾದ್ಯವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ರ್ಯಾಬಿಟ್ ತಂಡ 4.1 ಓವರ್‍ಗಳಲ್ಲಿ ಗೆಲುವಿನ ದಡ ಸೇರಿತು. ಇದರೊಂದಿಗೆ ಟೀಮ್ ರ್ಯಾಬಿಟ್ ತಂಡ ಮೊದಲೇ ಆವೃತ್ತಿಯ ಮೊದಲ ಚಾಂಪಿಯನ್ ಆಗಿ ಹೊರಹೊಮ್ಮಿತು.
ಈ ಮೊದಲು ಪಂದ್ಯಾಟವನ್ನು ಮೇ 10 ಮತ್ತು 11 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಆ ದಿನಗಳಲ್ಲಿ ಮಳೆ ಬಂದ ಕಾರಣ ಪಂದ್ಯಾಟವನ್ನು ಜೂನ್ 1 ಮತ್ತು 2 ರಂದು ನಡೆಸಲಾಯಿತು.
ಬಹುಮಾನ ವಿತರಣೆ : ಪಂದ್ಯಾಟದ ಮ್ಯಾನ್ ಆಫ್ ದ ಮ್ಯಾಚ್ ಅನ್ನು ಶ್ರೀ (ಚೀಯ), ಬೆಸ್ಟ್ ಬೌಲರ್ ಆಗಿ ಕುಟ್ಟಪ್ಪ, ಸರಣಿ ಪುರುಷೋತ್ತಮ ಮತ್ತು ಬೆಸ್ಟ್ ಬ್ಯಾಟ್ಸ್‍ಮನ್ ಜೀವನ್ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಭಗವತಿ ಎಸ್ಟೇಟ್‍ನ ನಿರ್ದೇಶಕರಾದ ಡಾ. ರಾಜ ವಿಜಯ್ ಕುಮಾರ್ ಈ ಸಣ್ಣ ಊರಲ್ಲಿ ಇಷ್ಟೊಂದು ಒಳ್ಳೆಯ ಕ್ರಿಕೆಟ್ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಈಗಿನ ಕಾಲದಲ್ಲಿ ದೊಡ್ಡ ದೊಡ್ಡ ನಗರದಲ್ಲಿ ವಾಸಿಸುವ ಜನರಿಗೆ ಪಕ್ಕದ ಮನೆಯವರೊಂದಿಗೂ ಮಾತನಾಡಲು ಸಮಯವಿಲ್ಲ. ಆದರೆ ಈ ಸಣ್ಣ ಊರಲ್ಲಿ ಎಲ್ಲರನ್ನೂ ಒಂದು ಕಡೆ ಸೇರಿಸಿ ಒಂದು ಕ್ರೀಡಾಕೂಟ ನಡೆಸಿರುವುದು ಮೆಚ್ಚುವಂತದ್ದು. ಇದು ಇಲ್ಲಿಗೆ ನಿಲ್ಲದೆ ನಿರಂತರವಾಗಿ ಮುಂದುವರಿಯಲಿ ಎಂದು ಹೇಳಿದರು.
ಮತ್ತೋರ್ವ ಅತಿಥಿ ಹಟ್ಟಿಹೊಳೆ ಧರ್ಮಕೇಂದ್ರದ ಧರ್ಮಗುರುಗಳು ಹಾಗೂ ನಿರ್ಮಲ ವಿದ್ಯಾ ಭವನದ ವ್ಯವಸ್ಥಾಪಕ ರೆ.ಫಾ.ಗಿಲ್ಬರ್ಟ್ ಡಿಸಿಲ್ವಾ ಮಾತನಾಡಿ, ಕ್ರೀಡೆ ಎಲ್ಲರನ್ನೂ ಒಗ್ಗೂಡಿಸುತ್ತದೆ. ಹೆಚ್‍ಪಿಎಲ್ ಕ್ರಿಕೆಟ್ ಐಪಿಎಲ್ ಮಾದರಿಯಲ್ಲಿ ನಡೆಯಬೇಕು. ತಂಡದ ಮಾಲೀಕರು ತಮ್ಮ ನೆಚ್ಚಿನ ಆಟಗಾರರನ್ನು ಉಳಿಸಿಕೊಂಡು ಮುಂದಿನ ವರ್ಷ ಹೊಸಬರನ್ನು ಸೇರಿಸಿ ಅದೇ ತಂಡವನ್ನು ಬಲಿಷ್ಠಗೊಳಿಸಿಕೊಂಡು ಹೋಗಬೇಕು. ಆಗ ಮಾತ್ರ ಪಂದ್ಯಾವಳಿ ಇನ್ನೂ ಕುತೂಹಲಬರಿತವಾಗುತ್ತದೆ ಎಂದರು.
ವೇದಿಕೆಯಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷರಾದ ಎನ್.ಭಾಸ್ಕರ್, ಐವನ್ ಡಿಸೋಜ, ವಿಜಯ, ರತೀಶ್, ಕುಟ್ಟಪ್ಪ, ಪ್ರಸಾದ ಇತರರು ಇದ್ದರು.