ಮಡಿಕೇರಿ ಜೂ.5 NEWS DESK : ಹಾಕತ್ತೂರು ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಡಿಕೇರಿಯ ಶಾಖೆ, ಹಾಕತ್ತೂರು ತೊಂಭತ್ತಮನೆಯ ತ್ರಿನೇತ್ರ ಯುವಕ ಸಂಘ, ಕೊಡಗು ಜಿಲ್ಲಾ ಹಾಗೂ ಮಡಿಕೇರಿ ತಾಲ್ಲೂಕು ಯುವ ಒಕ್ಕೂಟ ಮತ್ತು ಹಾಕತ್ತೂರು ಸರಕಾರಿ ಪ್ರೌಢ ಶಾಲೆಯ ಸಹಯೋಗದಲ್ಲಿ ಶಾಲಾ ಮೈದಾನದಲ್ಲಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಈ ಸಂದರ್ಭ ಹೆಚ್‍ಡಿಎಫ್‍ಸಿ ಬ್ಯಾಂಕ್ ಮಡಿಕೇರಿ ಶಾಖೆ ವ್ಯವಸ್ಥಾಪಕ ನಾರಾಯಣ್, ಸಿಬ್ಬಂದಿ ಗಳಾದ ಕವನ, ಮಂಜುಳಾ, ಹಿತೇಶ್, ಕುಮಾರ್, ಭರತ್ ಶ್ರೀನಿವಾಸ, ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಪಿ.ಪಿ.ಸುಕುಮಾರ್, ಮಾಜಿ ಅಧ್ಯಕ್ಷ ಟಿ.ಕೆ.ಸಂತೋಷ್. ಗ್ರಾ.ಪಂ ಸಿಬ್ಬಂದಿಗಳಾದ ಸೋವಿಯತ್, ಅಹ್ಮದ್, ಗ್ರಂಥಪಾಲಕಿ ಸುನೀತಾ, ಹಾಕತ್ತೂರು ಸರಕಾರಿ ಪ್ರೌಢಶಾಲೆ ಶಿಕ್ಷಕರಾದ ಎಂ.ವನಜ, ಸಿ.ಎಂ.ಮುನೀರ್, ಬಿ.ಎನ್.ಜಯಂತಿ, ಕೆ.ಕೆ.ಪುಷ್ಪ, ಕೆ.ಜಿ.ಭವಾನಿಶಂಕರ್, ಕೆ.ಎಸ್.ಸಹನಾ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.