ಗುಂಡ್ಲುಪೇಟೆ ಜೂ.6 NEWS DESK : ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದ ಕರಡಿಯನ್ನು ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ಗ್ರಾಮಸ್ಥರ ಕೂಗಾಟದಿಂದ ಸಿಕ್ಕ ಸಿಕ್ಕಲ್ಲಿ ಓಡಾಡಿದ ಕರಡಿ ನಿತ್ರಾಣಗೊಂಡು ಜಮೀನೊಂದರಲ್ಲಿ ಸೆರೆಯಾಯಿತು. ಸ್ಥಳೀಯರು ನೀಡಿದ ಮಾಹಿತಿ ಹಿನ್ನೆಲೆ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಿಮಿಸಿ ಪರಿಶೀಲನೆ ನಡೆಸಿದರು. ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಸುಮಾರು 6 ವರ್ಷದ ಕರಡಿಯನ್ನು ಬಲೆಯ ಮೂಲಕ ಸೆರೆ ಹಿಡಿದು ಮೂಲೆಹೊಳೆ ಅರಣ್ಯಕ್ಕೆ ಬಿಡಲಾಯಿತು. ಸೆರೆಯಾದ ಕರಡಿಗೆ ಅರಣ್ಯ ಇಲಾಖಾ ಪಶು ವೈಧ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಚಿಕಿತ್ಸೆ ನೀಡಿದರು.









