ಸುಂಟಿಕೊಪ್ಪ ಜೂ.6 NEWS DESK : ವಿಶ್ವ ಪರಿಸರ ದಿನದ ಅಂಗವಾಗಿ ಸಂತ ಅಂತೋಣಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಿಸರ ಸಂರಕ್ಷಣೆಯ ಕುರಿತು ಪಟ್ಟಣದಲ್ಲಿ ಜಾಗೃತಿ ಜಾಥ ನಡೆಯಿತು.
ಶಾಲೆಯ ಸ್ಕೌಟ್, ಗೈಡ್ಸ್, ಬುಲ್‍ಬುಲ್ ಹಾಗೂ ಕಫ್ಸ್ ಸೇವಾದಳದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಪರಿಸರದ ಬಗ್ಗೆ ಘೋಷಣೆಗಳನ್ನು ಕೂಗುತ್ತ ನೀರನ್ನು ಮಿತವಾಗಿ ಬಳಸಿ, ಗಿಡ ಮರಗಳನ್ನು ಬೆಳೆಸುವುದರೊಂದಿಗೆ ಪರಿಸರವನ್ನು ಸಂರಕ್ಷಿಸಿ ಎಂದು ಜಾಗೃತಿ ಮೂಡಿಸಿದರು.