ಸುಂಟಿಕೊಪ್ಪ ಜೂ.6 NEWS DESK : ನಮ್ಮ ಪರಿಸರ ಉಳಿಸುವುದರೊಂದಿಗೆ ಜಲಮೂಲಗಳು ಕಲುಷಿತಗೊಳ್ಳದಂತೆ ತಡೆಯುವ ಕೆಲಸಕ್ಕೆ ನಾವೆಲ್ಲಾರೂ ಪಣತೊಡಬೇಕೆಂದು ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ಹೇಳಿದರು.
ಸುಂಟಿಕೊಪ್ಪ ಪೊಲೀಸ್ ಠಾಣೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀಶಾ, ನಾವು ಮೊದಲು ಪರಿಸರ ಸ್ನೇಹಿಗಳಗೋಣ. ಅಗತ್ಯಗಳಿಗಷ್ಟೇ ಸಂಪನ್ಮೂಲಗಳನ್ನು ಉಳಿಸಿ ಬಳಸುವಂತಾಗಬೇಕು. ನಮ್ಮ ಪೂರ್ವಿಕರು ನಮಗೆ ನೀಡಿರುವ ಈ ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ಕಾರ್ಯಕ್ಕೆ ಈಗಿನಿಂದಲೇ ನಾವು ಸನ್ನದ್ಧರಾಗಬೇಕು ಎಂದರು.
ಕಾವೇರಿ ನದಿಗೆ ಕಲುಷಿತ ನೀರನ್ನು ಬಿಡಬಾರದು. ನದಿ ಮೂಲಗಳನ್ನು ನಾವುಗಳು ಸಂರಕ್ಷಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹಾಗೂ ಅಪರಾಧ ವಿಭಾಗದ ಎಸ್.ಐ.ನಾಗರಾಜು ಠಾಣಾ ಆವರಣದಲ್ಲಿ ಗಿಡಗಳನ್ನು ನೆಟ್ಟರು.
ಎ.ಎಸ್.ಐ ತೀರ್ಥಕುಮಾರ್, ಪೊಲೀಸ್ ಪೇದೆಗಳಾದ ಜಗದೀಶ್, ಗ್ರಾಮಸ್ಥರಾದ ಧನುಕಾವೇರಪ್ಪ, ಪ್ರಶಾಂತ್(ಕೋಕಾ), ತ್ಯಾಗರಾಜು ಮತ್ತಿತರರು ಇದ್ದರು.