ವಿರಾಜಪೇಟೆ ಜೂ.13 NEWS DESK : ವಿರಾಜಪೇಟೆ ಮದರ್ ತೆರೇಸಾ ಸೇವಾ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಪಟ್ಟಣದ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 175 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂತ ಅನ್ನಮ್ಮ ದೇವಾಲಯದ ಮುಖ್ಯ ಗುರುಗಳಾದ ವಂ. ಜೇಮ್ಸ್ ಡೋಮಿನಿಕ್, ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಮದರ್ ತೆರೇಸಾ ಅವರ ಆದರ್ಶಗಳು ಮಕ್ಕಳಿಗೆ ದಾರಿದೀಪವಾಗಬೇಕು ಎಂದು ತಿಳಿಹೇಳಿದರು.
ಸಂತ ಅನ್ನಮ್ಮ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ವಂ. ಗುರುಗಳಾದ ಮದಲೈ ಮುತ್ತು ಮಕ್ಕಳಿಗೆ ಆಶೀರ್ವಚನ ನೀಡುತ್ತಾ, ಮಕ್ಕಳು ಇದರ ಪ್ರಯೋಜನವನ್ನು ಪಡೆದು ಮುಂದೆ ಒಳ್ಳೆಯ ವ್ಯಕ್ತಿಗಳಾಗಿ ಸಮಾಜ ಸೇವೆ ಮಾಡಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಅದ್ವೈತ ಸುರೇಶ್, ಪೊವೆಲ್ ಮೆನೇಜಸ್ ಎಂಬಿಎ ಪ್ರಥಮ ರ್ಯಾಂಕ್, ಕುಮಾರಿ ಅನುಷಾ ಮಚಾಡೋ ಎಂಬಿಎನಲ್ಲಿ ಚಿನ್ನದ ಪದಕ ವಿಜೇತೆ ಹಾಗೂ ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲರಾಗಿ ಪದೋನ್ನತಿ ಪಡೆದ ಬೆನೆಡಿಕ್ಟ್ ಸಾಲ್ಡಾನಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಪಿ.ಎಸ್ ಮಚ್ಚಾಡೋ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮಾರ್ಟಿನ್ ಬರ್ನಾಡ್, ಖಜಾಂಚಿ ಜೇಮ್ಸ್, ಪ್ರೆಸಿಲ್ಲಾ ಅಲ್ಮೆಡ, ಜಂಟಿ ಕಾರ್ಯದರ್ಶಿ ಅರುಣ ಡಿಸೋಜ, ಮೆನೆಜಸ್ ಕಾರ್ಯದರ್ಶಿ ಅನಿತಾ ನೊರೋನ, ಸ್ಥಾಪಕ ಸದಸ್ಯರಾದ ಜಾನಿ ಮೆನೆಜಸ್ ಟ್ರಸ್ಟಿಗಳಾದ ಮರ್ವಿನ್ ಲೋಬೊ, ಚಾಲ್ರ್ಸ್ ಡಿಸೋಜ ಹಾಗೂ ಸಂಘದ ಸದಸ್ಯರು ಹಾಜರಿದ್ದರು.