ಕುಶಾಲನಗರ, ಜೂ.17 NEWS DESK : ಹೆಬ್ಬಾಲೆ ಪ್ರೌಢಶಾಲೆಯ 8ನೇ ತರಗತಿ, 9ನೇ ತರಗತಿ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡಿರುವ ಪಠ್ಯ ಪುಸ್ತಕಗಳನ್ನು ಹೆಬ್ಬಾಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಪಿ.ಶಿವಪ್ಪ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತು, ಸಂಯಮದಿಂದ ಉತ್ತಮ ಶಿಕ್ಷಣ ಪಡೆಯುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು. ಉತ್ತಮ ಓದಿನೊಂದಿಗೆ ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತರಬೇಕು. ಪುಸ್ತಕಗಳನ್ನು ಓದುವ ಮೂಲಕ ಉತ್ತಮ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಶಿವಪ್ಪ ಸಲಹೆ ನೀಡಿದರು.
ವಿದ್ಯಾರ್ಥಿಗಳು ಕ್ಷೀರ ಭಾಗ್ಯ, ಪ್ರಧಾನಮಂತ್ರಿ ಪೋಷಣ್ ಭಾಗ್ಯ ಅಕ್ಷರ ದಾಸೋಹ ಇತ್ಯಾದಿಗಳ ಫಲಾನುಭವಿಗಳು ವಿದ್ಯಾರ್ಥಿಗಳಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತ ರೀತಿಯಲ್ಲಿ ಜಾರಿಗೆ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಎಚ್.ಪಿ.ಉದಯಕುಮಾರ್, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಎಂ.ಎನ್.ವೆಂಕಟನಾಯಕ್. ಶಿಕ್ಷಕರಾದ ಸಿ.ಡಿ ಲೋಕೇಶ್, ಡಿ.ಕವಿತಾ, ಎ.ಕೆ.ಅನಂತ, ಶ್ವೇತ ಹಾಜರಿದ್ದರು.