ಮಡಿಕೇರಿ ಜೂ.17 NEWS DESK : ಸಿದ್ದಾಪುರದ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆಗೆ ಆಡಳಿತ ವ್ಯವಸ್ಥೆಯ ಪರೋಕ್ಷ ಕುಮ್ಮಕ್ಕು ಇದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.
ಸಿದ್ದಾಪುರದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಇಂದು ನಡೆದ ಶಾಂತಿಯುತ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಪವಿತ್ರ “ಕೊಡವ ಲ್ಯಾಂಡ್” ಉಳಿಯಬೇಕಾದರೆ ಬೃಹತ್ ಭೂಪರಿವರ್ತನೆ ಪ್ರಕ್ರಿಯೆಗಳು ಸ್ಥಗಿತಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳ ಭೂಮಾಫಿಯ ಹಾಗೂ ರಾಜಕೀಯ ಬೆಂಬಲಿಗರು ಭೂಲೋಕದ ಸ್ವರ್ಗವೆಂದೇ ಪರಿಗಣಿಸಲ್ಪಟ್ಟಿರುವ ಕೊಡವ ಭೂಮಿಯನ್ನು ವ್ಯಾಪರೀಕರಣಗೊಳಿಸಲು ಮುಂದಾಗಿದ್ದಾರೆ. ಹಸಿರ ಸುಂದರ ಪ್ರಕೃತಿಯ ಸೊಬಗನ್ನು, ಜಲಮೂಲಗಳನ್ನು ನಾಶಗೊಳಿಸಿ ಬೃಹತ್ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾರೆ. ಭೂಮಿ ಖರೀದಿ ವ್ಯವಹಾರ ಒಂದು ಜೂಜಾಟದಂತೆ ನಡೆಯುತ್ತಿದ್ದು, ಈ ಬೆಳವಣಿಗೆ ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರ ನಾಶಕ್ಕೂ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಬೃಹತ್ ಭೂಪರಿವರ್ತನೆಗಳಿಂದ ಕೊಡಗಿನಲ್ಲಿ ಜನಸಂಖ್ಯಾ ಸ್ಫೋಟ ಸಂಭವಿಸಿ ಆದಿಮಸಂಜಾತ ಬುಡಕಟ್ಟು ಜನಾಂಗ ಮೂಲನಿವಾಸಿ ಕೊಡವರ ಅಸ್ತಿತ್ವಕ್ಕೆ ದಕ್ಕೆ ಬರಬಹುದು. ದೈತ್ಯಾಕಾರದ ವಿಲ್ಲಾಗಳು, ಮೆಗಾ ಟೌನ್‌ಶಿಪ್‌ಗಳು ಮತ್ತು ಮನೆ ನಿವೇಶನಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಇದರಿಂದ ಕೊಡವ ನೆಲದಲ್ಲಿ ಬದುಕು ಕಂಡುಕೊAಡಿರುವ ಇತರ ಜನಾಂಗದ ಅಸ್ತಿತ್ವಕ್ಕೂ ದಕ್ಕೆ ಬರಬಹುದು. ಬಡವರಿಗೆ ಹಣದ ಆಮಿಷವೊಡ್ಡಿ ಇಡೀ ಭೂಪ್ರದೇಶವನ್ನು ಆವರಿಸಿಕೊಳ್ಳುತ್ತಿರುವ ಭೂಮಾಫಿಯಾದ ಬಗ್ಗೆ ಕೊಡವರು ಮಾತ್ರವಲ್ಲದೆ ಇತರರು ಕೂಡ ಜಾಗೃತರಾಗಬೇಕು ಎಂದು ನಾಚಪ್ಪ ತಿಳಿಸಿದರು.
ಸಿದ್ದಾಪುರ ವ್ಯಾಪ್ತಿಯಲ್ಲಿ ಭೂಪರಿವರ್ತನೆಯಾಗುತ್ತಿಲ್ಲವೆಂದು ಆಡಳಿತ ವ್ಯವಸ್ಥೆ ಹೇಳಿಕೊಳ್ಳುತ್ತಿದೆ. ಆದರೆ ಈ ಬಗ್ಗೆ ನಮಗೆ ಸಂಶಯವಿದೆ, ಭೂಪರಿವರ್ತನೆ ಮತ್ತು ಸಾವಿರಾರು ಮರಗಳ ಹನನದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಕಾಫಿ ತೋಟವನ್ನು ಸಂಪೂರ್ಣವಾಗಿ ಖರೀದಿಸಿ ನಿವೇಶನಗಳನ್ನಾಗಿ ಮಾರಾಟ ಮಾಡಿದ ನಂತರ ಭೂಪರಿರ್ತನೆಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಇಡೀ ಕಾಫಿ ತೋಟದ ಭೂಪರಿವರ್ತನೆಗೆ ಮುಂದಾದರೆ ಕಾನೂನಿನ ಅಡ್ಡಿ ಮಾತ್ರವಲ್ಲ ಹೋರಾಟಗಳು ನಡೆಯುತ್ತವೆ ಎನ್ನುವ ಆತಂಕ ಭೂಮಾಪಿಯಾಗಳಿಗಿದೆ ಎಂದು ಆರೋಪಿಸಿದರು.
ಸಹಕಾರ ಸಂಘದ ಸಾಲಕ್ಕಾಗಿ ಬೆಳೆಗಾರರು ಅರ್ಜಿ ಸಲ್ಲಿಸಿದ ಸಂದರ್ಭ ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ಅರ್ಜಿ ವಿಲೇವಾರಿ ವಿಳಂಬ ಮಾಡಿ ಕಿರುಕುಳ ನೀಡಲಾಗುತ್ತಿದೆ. ಮೂಲನಿವಾಸಿ ಬೆಳೆಗಾರರು ಹಾಗೂ ಕೃಷಿಕ ವರ್ಗ ಜಲಮೂಲದಿಂದ ನೀರು ಬಳಸಿದರೆ ಆಡಳಿತ ವ್ಯವಸ್ಥೆ ಇಲ್ಲಸಲ್ಲದ ನಿಯಮ ರೂಪಿಸಿ ಅಡ್ಡಿಪಡಿಸುತ್ತದೆ. ಆದರೆ ಬಂಡವಾಳಶಾಹಿಗಳು ರಾಜಾರೋಷವಾಗಿ ತಮ್ಮ ಲಾಭಕ್ಕಾಗಿ ನೀರನ್ನು ಬಳಸುವಾಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಗಳು ಡಾ.ಸ್ವಾಮಿನಾಥನ್ ಸಮಿತಿಯ ವರದಿಯನ್ನು ಉಲ್ಲಂಘಿಸಿವೆ. ಸ್ವಾಮಿನಾಥನ್ ತಮ್ಮ ವರದಿಯಲ್ಲಿ ಕೃಷಿಭೂಮಿಯನ್ನು ಹಾಗೆಯೇ ಉಳಿಸಿಕೊಳ್ಳಲು ಶಿಫಾರಸ್ಸು ಮಾಡಿದ್ದಾರೆ. ಲಭ್ಯವಿರುವ ಕೃಷಿಭೂಮಿಯ ಪ್ರಮಾಣ ಕಡಿಮೆಯಾದಂತೆ ಗ್ರಾಹಕರಿಗೆ ಲಭ್ಯವಿರುವ ಆಹಾರದ ಗುಣಮಟ್ಟ ಕಡಿಮೆಯಾಗುತ್ತದೆ. ಇದು ಆರ್ಥಿಕತೆಗೆ ಮಾತ್ರವಲ್ಲದೆ ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಆರ್ಟಿಕಲ್ 51(ಎ), 51ಎ (ಎಫ್) – ನಮ್ಮ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಮೌಲ್ಯೀಕರಿಸಲು ಮತ್ತು ಸಂರಕ್ಷಿಸಲು, 51ಎ(ಜಿ)-ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡAತೆ ನೈಸರ್ಗಿಕ ಆರ್ಥಿಕತೆಯನ್ನು ಮೌಲ್ಯೀಕರಿಸಲು, ರಕ್ಷಿಸಲು, ಸುಧಾರಿಸಲು ಮತ್ತು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಲು, 51ಎ(ಎನ್)-ವೈಜ್ಞಾನಿಕ ಮನೋಭಾವ, ಮಾನವತಾವಾದ, ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕುಟ್ಟ-ಶ್ರೀಮಂಗಲದಲ್ಲಿ ಉದ್ದೇಶಿತ ಪಟ್ಟಣಗಳು ಮತ್ತು ಆರ್ಥಿಕ ಕಾರಿಡಾರ್‌ಗಳಿಗಾಗಿ ಭೂಮಿಯನ್ನು ಜೂಜಾಟದ ರೀತಿಯಲ್ಲಿ ಖರೀದಿಸಲಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೆöÊ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ ಎಂದು ನಾಚಪ್ಪ ಆರೋಪಿಸಿದರು.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವೆಂದು ಪ್ರತಿಪಾದಿಸಿದರು.
ನಮ್ಮ ಅನುವಂಶಿಕ ಭೂಮಿಯನ್ನು ಉಳಿಸಿಕೊಳ್ಳಲು, ಮಾತೃಭೂಮಿ, ಶಾಶ್ವತವಾದ ದೀರ್ಘಕಾಲಿಕ ಜಲಸಂಪನ್ಮೂಲಗಳು, ನಯನ ಮನೋಹರ ಪರಿಸರ, ಭೂಗೋಳವನ್ನು ನೈಸರ್ಗಿಕವಾಗಿ ವಿಹಂಗಮ ಪರ್ವತಗಳು, ಬೆಟ್ಟಗಳು, ನಿತ್ಯಹರಿದ್ವರ್ಣದ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಜೈವಿಕ ವೈವಿಧ್ಯತೆ, ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಜಾನಪದ ಪರಂಪರೆ ಮತ್ತು ಭೂಮಿಯೊಂದಿಗೆ ಬೆಸೆದುಕೊಂಡಿರುವ ಕೊಡವರ ಯೋಧರ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಈ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಗಾಗಿ ಸ್ವಯಂ-ಆಡಳಿತವನ್ನು ಸಂವಿಧಾನದ ವಿಧಿ 244, 371 ಆರ್/ಡಬ್ಲ್ಯೂ 6 ಮತ್ತು 8ನೇ ಶೆಡ್ಯೂಲ್ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳು ವಿಶ್ವ ರಾಷ್ಟ್ರ ಸಂಸ್ಥೆ ಹೊರಡಿಸಿರುವ ಆದಿಮಸಂಜಾತ ಜನಾಂಗದ ಹಕ್ಕುಗಳ ಅಂತರಾಷ್ಟ್ರೀಯ ಕಾನೂನಿನಂತೆ ಜಾರಿಯಾಗುವ ಅಗತ್ಯವಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.
ಪಟ್ಟಮಾಡ ಲಲಿತಾ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಇಟ್ಟೀರ ಸಬಿತಾ, ಮುಂಡಚಾಡಿರ ಫ್ಯಾನ್ಸಿ ಕಿರಣ್, ಬುಟ್ಟಿಯಂಡ ಐಹಿಂದ್ಯಾ ಹರೀಶ್, ಬುಟ್ಟಿಯಂಡ ಪ್ರಿಯಾ, ಬುಟ್ಟಿಯಂಡ ಅನನ್ಯ, ಬುಟ್ಟಿಯಂಡ ಕೃಪಾ ಹರೀಶ್, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಕಮೋಡೋರ್ ಕುಕ್ಕೇರ ಉತ್ತಪ್ಪ, ಮಂಡೇಪಂಡ ಕುಟ್ಟಣ, ದೇವಣಿರ ಸುಜಯ್, ಚೆಂದಂಡ ಚುಮ್ಮಿ ದೇವಯ್ಯ, ಬುಟ್ಟಿಯಂಡ ಹರೀಶ್, ಮಂಡೇಪAಡ ಕುಶಾಲಪ್ಪ, ಮುಕ್ಕಾಟಿರ ಬೋಪಣ್ಣ, ಪುಟ್ಟಿಚಂಡ ಉದಯ್, ಚೇರಂಡ ಸುಭಾಷ್, ಚೆಂದಂಡ ಪೊನ್ನಪ್ಪ, ನೆಲ್ಲಮಕ್ಕಡ ವಿವೇಕ್, ಚೇನಂಡ ಅಜಿತ್ ಪೂಣಚ್ಚ, ಕುಟ್ಟಂಡ ಪ್ರಕಾಶ್, ಮೇಕೇರಿರ ದಿಲೀಪ್, ಮುಂಡಚಾಡಿರ ಕಿರಣ್, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಪುಟ್ಟಿಚಂಡ ಡಾನ್, ಪುಟ್ಟಿಚಂಡ ಸನ್ನು, ಚೇರಂಡ ಸುನೀಲ್, ಬಲ್ಲರಂಡ ಅಭಿನ್, ಮುಕ್ಕಾಟಿರ ವಿನಯ್ ಬೋಪಣ್ಣ, ಅಪ್ಪಚೆಟ್ಟೋಳಂಡ ಗಿರೀಶ್, ಕುಟ್ಟಂಡ ಶ್ಯಾಮ್, ಪಾಲಚಂಡ ಜಾಲಿ, ಕುಕ್ಕೆರ ದಿನೇಶ್, ಅಣ್ಣರ್‌ಕಂಡ ವಿಜು, ಬಲ್ಲಚಂಡ ಚಂದನ್, ಬಲ್ಲಚಂಡ ವಿಠಲ, ಪುಟ್ಟಿಚಂಡ ಶಂಕರ್, ಕಾಂಡೇರ ಸುರೇಶ್, ಬೊಟ್ಟಂಗಡ ಗಿರೀಶ್, ಕೇಳಪಂಡ ಕುಶಾಲಪ್ಪ, ಮೂಕೊಂಡ ದಿಲೀಪ್, ಪಾರ್ವಂಗಡ ನವೀನ್, ಅಜ್ಜಿಕುಟ್ಟೀರ ಲೋಕೇಶ್, ಚಂಬಂಡ ಜನತ್, ಚೋಳಪಂಡ ನಾಣಯ್ಯ, ಎಸ್.ಕೆ.ಸತೀಶ್, ವಕೀಲ ಹೇಮಚಂದ್ರ, ತೊಂಡಿಯಂಡ ಪೂಣಚ್ಚ, ಜಮ್ಮಡ ಮೋಹನ್ ಮತ್ತಿತರರು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೃಹತ್ ಭೂಪರಿವರ್ತನೆ ವಿರುದ್ಧ ಹಕ್ಕೊತ್ತಾಯ ಮಂಡಿಸಿ ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಸಿದ್ದಾಪುರ ಜಂಕ್ಷನ್ ನಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿದ ಸಿಎನ್‌ಸಿ ಪ್ರಮುಖರು ಬೃಹತ್ ಭೂಪರಿವರ್ತನೆ ಸ್ಥಗಿತಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಜೂ.24 ರಂದು ಗೋಣಿಕೊಪ್ಪ, ಜು.1 ರಂದು ಕಕ್ಕಬ್ಬೆ, ಜು.6 ರಂದು ಚೆಟ್ಟಳ್ಳಿಯಲ್ಲಿ ಜನಜಾಗೃತಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಪೊನ್ನಂಪೇಟೆ, ತಿತಿಮತಿ, ಹುದಿಕೇರಿ, ವಿರಾಜಪೇಟೆ, ಮೂರ್ನಾಡು, ನಾಪೋಕ್ಲು, ಚೇರಂಬಾಣೆ, ಮಾದಾಪುರ ಮತ್ತು ಸುಂಟಿಕೊಪ್ಪದಲ್ಲಿ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು.