ಸೋಮವಾರಪೇಟೆ ಜೂ.21 NEWS DESK : ಆಕಸ್ಮಿಕ ಬೆಂಕಿಯಿಂದ ಮನೆಯೊಂದು ಹೊತ್ತಿ ಉರಿದಿರುವ ಘಟನೆ ಶುಕ್ರವಾರ ಮಧ್ಯಾಹ್ನ ಹಾನಗಲ್ಲು ಬಾಣೆಯಲ್ಲಿ ಸಂಭವಿಸಿದೆ. ಲೀಲಾವತಿ ಎಂಬವರಿಗೆ ಸೇರಿದ ಮನೆಯಾಗಿದ್ದು, ಸೊಸೆಯೊಂದಿಗೆ ವಾಸವಾಗಿದ್ದರು. ಸೊಸೆ ಪಟ್ಟಣಕ್ಕೆ ತೆರಳಿದ್ದಾಗ, ಲೀಲಾವತಿ ಅವರು ಮನೆಯ ಹೊರಗೆ ಕೆಲಸ ಮಾಡುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಮನೆಗೆ ಬೆಂಕಿ ಹತ್ತಿಕೊಂಡಿದೆ. ಟಿ.ವಿ. ಫ್ರಿಡ್ಜ್, ಬಟ್ಟೆ ಇತರ ಸಾಮಾಗ್ರಿಗಳು ಸುಟ್ಟ ಹೋಗಿವೆ. ತುಂಬ ಹಳೆಯದಾದ ಹೆಂಚಿನ ಮನೆಯಾಗಿದ್ದು, ಮರಮುಟ್ಟುಗಳು ಗೆದ್ದಲು ಹಿಡಿದಿದ್ದ ಪರಿಣಾಮ, ಬೇಗನೆ ಬೆಂಕಿ ಹತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಬೆಂಕಿಯನ್ನು ಆರಿಸಿದ್ದಾರೆ. ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.









