ಮಡಿಕೇರಿ ಜೂ.22 NEWS DESK : ಕೊಣಂಜಗೇರಿ ಪಂಚಾಯಿತಿ ವ್ಯಾಪ್ತಿಯ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಆಯುಷ್ ಆರೋಗ್ಯ ಮತ್ತು ಯೋಗ ಕೇಂದ್ರದ ಯೋಗ ತರಬೇತುದಾರರಾದ ಕನ್ನಿಕಾ, ಮತ್ತು ಪಾರಾಣೆ ಸರ್ಕಾರಿ ಹೋಮಿಯೋಪತಿ ವೈದ್ಯೆ ಡಾ. ವೃಂದ ಯೋಗದ ಮೂಲಕ ದೇಹ, ಆರೋಗ್ಯ ಮತ್ತು ಜೀವನ ಸಮತೋಲನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೊಣಂಜಗೇರಿ ಗ್ರಾ.ಪಂ ಅಧ್ಯಕ್ಷ ಪಾಡೆಯಂಡ ಕಟ್ಟಿಕುಶಾಲಪ್ಪ, ಮುಖ್ಯೋಪಾಧ್ಯಾಯರಾದ ವೇದ ಪ್ರಸಾದ್, ಸಹಶಿಕ್ಷಕ ಕಿಶೋರ್ ಕುಮಾರ್, ಅತಿಥಿ ಶಿಕ್ಷಕರಾದ ಸುಮಿತ್ರ, ಮಂಜುಳ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.