ಕೂಡಿಗೆ ಜೂ.22 NEWS DESK : ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ತಮ್ಮ ಹುಟ್ಟುಹಬ್ಬವನ್ನು ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ಸರಳವಾಗಿ ಆಚರಿಸಿಕೊಂಡರು.
ನಂತರ ವಯೋವೃದ್ಧರ ಯೋಗ ಕ್ಷೇಮ ವಿಚಾರಿಸಿ, ವೃದ್ಧರಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಿದರು.
ಈ ಸಂದರ್ಭ ಮಾತನಾಡಿದ ಸಮಾಜ ಸೇವಕರು ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ, ಜನ್ಮ ದಿನವನ್ನು ವೃದ್ಧರೊಂದಿಗೆ ಆಚರಣೆ ಮಾಡುತ್ತಿರುವುದು ಮನಸ್ಸಿಗೆ ಬಹಳ ಸಂತೋಷ ಹಾಗೂ ನೆಮ್ಮದಿಯನ್ನು ನೀಡುತ್ತದೆ. ಆದ್ದರಿಂದ ಇಲ್ಲಿನ ವೃದ್ಧರಿಗೆ ಒಂದೊತ್ತಿನ ಆಹಾರವನ್ನು ನೀಡಿ, ಅವರೊಂದಿಗೆ ಜನ್ಮ ದಿನವನ್ನು ರವೀಂದ್ರ ಅಭಿಮಾನಿ ಬಳಗದ ವತಿಯಿಂದ ಆಚರಣೆ ಮಾಡುತ್ತಿದ್ದಾರೆ ಎಂದರು.
ಕೂಡಿಗೆ ರಾಜೇಗೌಡ ಮಾತನಾಡಿ. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಸಮಾಜ ಸೇವಕರು ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರಣ್ಣ ಅವರ ಹುಟ್ಟುಹಬ್ಬವನ್ನು ಕೂಡಿಗೆಯ ಶಕ್ತಿ ವೃದ್ಧಾಶ್ರಮದ ವಯೋ ವೃದ್ಧರ ಜೊತೆ ಆಚರಣೆ ಮಾಡುತ್ತಿರುವುದು ಶಕ್ತಿ ವೃದ್ಧಾಶ್ರಮದ ವಯೋವೃದ್ಧರಿಗೆ ತುಂಬಾ ಖುಷಿ ತಂದಂತೆ ಹಾಗಿದೆ ಹಾಗಾಗಿ ಈ ಬಾರಿ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಬಹಳ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೂಡಿಗೆ ಗ್ರಾ.ಪಂ ಸದಸ್ಯ ಕೆ.ಎಸ್.ಶಿವಕುಮಾರ್, ಕುಶಾಲನಗರ ನಾಡಪ್ರಭು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಪಿ.ರಾಜು, ಕುಶಾಲನಗರ ಪುರಸಭೆ ನಿರ್ದೇಶಕ ಶೇಕ್ ಕಲಿಮುಲಾ, ಹರಪಲ್ಲಿ ರವೀಂದ್ರ ಅವರ ಅಭಿಮಾನಿಗಳಾದ ಕಾಶಿಮ್. ಬಸಪ್ಪ, ಕೂಡಿಗೆ ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕ ಚಂದ್ರು ಹಾಗೂ ಇತರರು ಇದ್ದರು.
ವರದಿ : ಕೆ.ಆರ್.ಗಣೇಶ್ ಕೂಡಿಗೆ