ಮಡಿಕೇರಿ ಜೂ.22 NEWS DESK : ಕೊಡಗು ಜಿಲ್ಲಾ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನ ಅಂತ್ಯಕ್ಕೆ ರೂ.12.51 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ರಷ್ಟು ಡಿವಿಡೆಂಟ್‌ನ್ನು ನೀಡಲಾಗುವುದೆಂದು ಸಂಘದ ಅಧ್ಯಕ್ಷ ಸಿರಿಲ್ ಮೊರಾಸ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾ ಕಾರ್ಯವ್ಯಾಪ್ತಿಯುಳ್ಳ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘವು 2019ನೇ ವರ್ಷದಲ್ಲಿ ಸ್ಥಾಪನೆಗೊಂಡಿದ್ದು, ಸಂಘವು ಸ್ಥಾಪನೆಯಾದ ಪ್ರಾರಂಭದಲ್ಲೇ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಆರ್ಥಿಕ ಸಂಕಷ್ಟ ಎದುರಿಸಬೇಕಾದ ಸಂದರ್ಭದ ಹೊರತಾಗಿಯೂ ಸ್ಥಾಪನೆಯಾದ ಐದು ವರ್ಷಗಳ ಅಲ್ಪಾವದಿಯಲ್ಲೇ ಗಣನೀಯ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದರು.
ಸಂಘದಲ್ಲಿ ಒಟ್ಟು 1090 ಸದಸ್ಯರಿದ್ದು, ಸದಸ್ಯರಿಂದ ಪಾಲು ಬಂಡವಾಳವಾಗಿ 57 ಲಕ್ಷಗಳಿರುತ್ತದೆ. ಠೇವಣಿ ಹಾಗೂ ಸಾಲ ನೀಡುವಿಕೆಯಲ್ಲಿ ಗಣನೀಯ ಪ್ರಮಾಣದ ಪ್ರಗತಿಯನ್ನು ಸಾಧಿಸಲಾಗಿದ್ದು, ಮಾಚ್ ಅಂತ್ಯಕ್ಕೆ ರೂ.7.70 ಕೋಟಿ ಠೇವಣಿ ಹೊಂದಿದೆ. ಸದಸ್ಯರಿಗೆ ರೂ.5.29 ಕೋಟಿಯಷ್ಟು ವಿವಿಧ ಸಾಲಗಳನ್ನು ವಿತರಿಸಲಾಗಿದ್ದು, ಮಾರ್ಚ್ 2024ರ ಅಂತ್ಯಕ್ಕೆ ರೂ.6.28 ಕೋಟಿಯಷ್ಟು ವಿವಿಧ ಸಾಲಗಳು ಹೊರಬಾಕಿ ಇರುವುದಾಗಿ ಹೇಳಿದರು.
ಸಂಘದಲ್ಲಿ ಉಳಿತಾಯ ಮನೋಭಾವವನ್ನು ಹೆಚ್ಚಿಸುವ ಸಲುವಾಗಿ ಹಾಗೂ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಉದ್ದೇಶದಿಂದ ಕಡಿಮೆ ವೆಚ್ಚದ ಠೇವಣಿಗಳನ್ನು ಸಂಗ್ರಹಿಸಲು ಹೆಚ್ಚಿನ ಒತ್ತು ನೀಡಲಾಗಿದ್ದು, ಜಿಲ್ಲೆಯಾದ್ಯಂತ ಪ್ರಮುಖ ಪಟ್ಟಣದಲ್ಲಿ ಪಿಗ್ಮಿ ಏಜೆಂಟರನ್ನು ನೇಮಿಸುವ ಗುರಿ ಹೊಂದಲಾಗಿದೆ ಎಂದರು.
ಸAಘದಲ್ಲಿ ಇ ಸ್ಟಾಂಪಿAಗ್ ಸೌಲಭ್ಯ ಅಲ್ಲದೆ ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಸವಲಭ್ಯಗಳನ್ನು ಸಹ ಅಳವಡಿಸಲಾಗಿದ್ದು, ಸದಸ್ಯರೆಲ್ಲರೂ ಈ ಸೌಲಭ್ಯಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ ಸಿರಿಲ್ ಮೊರಾಸ್ ಜಿಲ್ಲೆಯಾದ್ಯಂತ ಪಟ್ಟಣಗಳಲ್ಲಿ ಸಹಕಾರ ಸಂಘಗಳ ಶಾಖೆ ತೆರೆಯುವುದು, ಸ್ವ ಸಹಾಯ ಸಂಘಗಳ ತೆರೆಯುವ ಮೂಲಕ ಮಹಿಳೆಯ ಆರ್ಥಿಕ ಅಭಿವೃದ್ಧಿ ಸಾಧಿಸುವುದು, ಇತ ಸೇವೆಗಳನ್ನು ತೆರೆಯುವುದು, ಶಾಲಾ ಮಕ್ಕಳಿಗೆ ಶೂನ್ಯ ದರಲ್ಲಿ ಖಾತೆ ತೆರೆಯುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜೂ.23 ರಂದು ಮಹಾಸಭೆ :: ಜೂ.23 ರಂದು ಸಂಘದ ಮಹಾಸಭೆ ನಡೆಯಲಿದ್ದು, ಸದಸ್ಯರು ತಪ್ಪದೆ ಹಾಜರಾಗುವಂತೆ ಸಿರಿಲ್ ಮೊರಾಸ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಟಿ.ಜೋಸೆಫ್, ನಿರ್ದೇಶಕರಾದ ಸಾರ್ಜೆಂಟ್ ಇಮ್ಮಾನುವೆಲ್, ಎ.ಜೋಸೆಫ್ ವಿನ್ಸೆಂಟ್, ಅನಿತಾ ತೆರೆಸಾ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬೌತಿಸ್ ಡಿಸೋಜ ಉಪಸ್ಥಿತರಿದ್ದರು.
Breaking News
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರನ್ನು ಗೌರವಿಸೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಗಣತಂತ್ರ ಹಬ್ಬದ ಮೂಲಕ ನಮ್ಮ ದೇಶದ ಸಾಂವಿಧಾನಿಕ ಅನನ್ಯತೆಯನ್ನು ಸಾರೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಸಂವಿಧಾನದ ಆಶಯಗಳಿಗೆ ಬದ್ಧರಾಗಿರೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ, ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾವೆಲ್ಲರೂ ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*