ಬೆಂಗಳೂರು, ಜು.15 NEWS DESK : ರಕ್ಷಣಾ ಸಚಿವಾಲಯದ ಡೈರೆಕ್ಟರ್ ಜನರಲ್ ರಿಸೆಟ್ಲಮೆಂಟ್ (ಡಿಜಿಆರ್), ಮಾಜಿ ಯೋಧರಿಗಾಗಿ 2024ರ ಜುಲೈ 19ರಂದು ಜಾಲಹಳ್ಳಿಯ ವಾಯುಪಡೆ ನಿಲ್ದಾಣ(ಎಂಟಿ ಕಾಂಪ್ಲೆಕ್ಸ್), ಜಾಲಹಳ್ಳಿ ಪೂರ್ವ (ಸಿಟಿಐ ಸಮೀಪ) ಉದ್ಯೋಗ ಮೇಳವನ್ನು ಆಯೋಜಿಸಿದೆ. ನಿವೃತ್ತ ಯೋಧರಿಗೆ ಎರಡನೇ ಅವಕಾಶವನ್ನು ಕಲ್ಪಿಸಲು ಉದ್ಯೋಗ ಬಯಸುವವರು ಮತ್ತು ಉದ್ಯೋಗದಾತರ ನಡುವೆ ಸಂಪರ್ಕ ಕಲ್ಪಿಸುವುದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ.
ಎಲ್ಲಾ ಮಾಜಿ ಸೈನಿಕರ ನೋಂದಣಿಯು ಬೆಳಿಗ್ಗೆ 7 ರಿಂದ 10 ರವರೆಗೆ ಸ್ಥಳದಲ್ಲಿಯೇ ನಡೆಯುತ್ತದೆ. ನೋಂದಾಯಿಸಲು, ಇಎಸ್ ಎಂ ತಮ್ಮ ಇಎಸ್ಎಂ ಗುರುತಿನ ಚೀಟಿ ಮತ್ತು ಇತ್ತೀಚಿನ ಸಿವಿ ಅಥವಾ ಸ್ವವಿವರ (ಬಯೋಡೇಟಾ)ದ ಐದು ಪ್ರತಿಗಳನ್ನು ಛಾಯಾಚಿತ್ರದೊಂದಿಗೆ ತರಬೇಕು. ಉದ್ಯೋಗಾಕಾಂಕ್ಷಿ ಇಎಸ್ ಎಂಗಳು ಬಹುಬಗೆಯ ಉದ್ಯೋಗಾವಕಾಶಗಳು ಮತ್ತು ಅಡತಡೆ ರಹಿತ ನೇಮಕ ಪ್ರಕ್ರಿಯೆಗಳನ್ನು ಪಡೆಯುತ್ತಾರೆ. ವಿವಿಧ ಕಾರ್ಪೊರೇಟ್ ಸಂಸ್ಥೆಗಳು ಸಂದರ್ಶನ/ಪರಿಶೀಲನೆ ಮತ್ತು ನಂತರ ಹಿರಿಯ ಮೇಲ್ವಿಚಾರಕರು, ಮಧ್ಯಮ/ಹಿರಿಯ ಮಟ್ಟದ ವ್ಯವಸ್ಥಾಪಕರಿಂದ ಹಿಡಿದು ಕಾರ್ಯತಂತ್ರದ ಯೋಜಕರು ಮತ್ತು ಯೋಜನಾ ನಿರ್ದೇಶಕರವರೆಗಿನ ನೇಮಕಾತಿಗಳಲ್ಲಿ ಇಎಸ್ಎಂ ಅನ್ನು ಬಳಸಿಕೊಳ್ಳಲಿದ್ದಾರೆ.
ಕಂಪನಿ/ಕಾರ್ಪೋರೇಟ್ ಸಂಸ್ಥೆಗಳು/ಉದ್ಯೋಗದಾತರು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು ತಮ್ಮ ಸ್ಟಾಲ್ ಗಳನ್ನು www.dgrindia.gov.in ನಲ್ಲಿ ಕಾಯ್ದಿರಿಸಬಹುದು. ಏನಾದರೂ ಪ್ರಶ್ನೆಗಳಿದ್ದರೆ ಅದಕ್ಕಾಗಿ ಜಂಟಿ ನಿರ್ದೇಶಕರು (ಎಸ್ ಇ ಮತ್ತು ಸಿಐ), ಡೈರೆಕ್ಟರ್ ಜನರಲ್ ರಿಸೆಟ್ಲಮೆಂಟ್, ವೆಸ್ಟ್ ಬ್ಲಾಕ್ IV, ಆರ್.ಕೆ.ಪುರಂ, ನವದೆಹಲಿ 110066 ಅಥವಾ ದೂರವಾಣಿ ಸಂಖ್ಯೆ 011-20862542 ಅಥವಾ ಇ ಮೇಲ್ ಅನ್ನು seopadgr@desw.gov.in, drzspne@desw.gov.in ಗೆ ಕಳುಹಿಸನಬಹುದು.