ಮಡಿಕೇರಿ ಜು.18 NEWS DESK : ತೀವ್ರ ಮಳೆಯಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಚೆಸ್ಕಾಂ) ರೂ.1.17 ಕೋಟಿ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಏಪ್ರಿಲ್‍ನಿಂದ ಇಲ್ಲಿಯವರೆಗೆ ನಷ್ಟದ ಮೊತ್ತ ಇದಾಗಿದ್ದು, ವಿದ್ಯುತ್ ಕಂಬ, ಟ್ರಾನ್ಸ್‍ಫಾರ್ಮರ್‍ಗಳನ್ನು ಬದಲಿಸಿ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ.
ಜಿಲ್ಲೆಯಲ್ಲಿ 1606 ಕಂಬಗಳು ಹಾನಿಯಾಗಿದ್ದು, 110 ಸರಿಪಡಿಸಲು ಬಾಕಿ ಇವೆ. 1.5 ಕಿ.ಮೀ ವಿದ್ಯುತ್ ವಾಹಕ ಅಳವಡಿಸಲಾಗಿದೆ. ಮಳೆಯಿಂದ ಹಾನಿಗೀಡಾದ 43 ಟ್ರಾನ್ಸ್‍ಫಾರ್ಮರ್‍ಗಳನ್ನು ಹೊಸದಾಗಿ ಅಳವಡಿಸಿ ಕ್ರಮವಹಿಸಲಾಗಿದೆ. 235 ಖಾಯಂ ಲೈನ್‍ಮೆನ್‍ಗಳಿದ್ದು, ಮಳೆಗಾಲಕ್ಕಾಗಿ ವಿವಿಧೆಡೆಗಳಿಂದ 40 ಲೈನ್‍ಮೆನ್‍ಗಳನ್ನು ನೇಮಿಸಿಕೊಳ್ಳಲಾಗಿದೆ. ಇದರೊಂದಿಗೆ ತಾತ್ಕಾಲಿಕವಾಗಿ 62 ಗ್ಯಾಂಗ್‍ಮೆನ್‍ಗಳನ್ನು ನಿಯೋಜಿಸಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೀವ್ರ ಮಳೆಯ ನಡುವೆ ಚೆಸ್ಕಾಂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿರುವುದು ಜಿಲ್ಲೆಯಲ್ಲಿ ಕಂಡುಬರುತ್ತಿದೆ.