ಮಡಿಕೇರಿ ಜು.24 NEWS DESK : ಮಾನವೀಯ ಸ್ನೇಹಿತರ ಒಕ್ಕೂಟ ವತಿಯಿಂದ ಕಾರುಣ್ಯ ಕಾರ್ಯಕ್ರಮದ ಮೂಲಕ ನಗರದ ವಿಕಾಸ್ ಆಶ್ರಮದ ಹಿರಿಯ ಜೀವಗಳಿಗೆ ಸ್ವೆಟರ್, ಹೊದಿಕೆ ವಿತರಿಸಲಾಯಿತು.
ವೃದ್ಧಾಶ್ರಮದ 31 ಹಿರಿಯ ಜೀವಗಳಿಗೆ ಸ್ವೆಟರ್, ಹೊದಿಕೆ, ಸ್ಕರ‍್ಫ್ , ಟೋಪಿ ಮುಂತಾದವುಗಳನ್ನು ವಿತರಿಸಿ ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಡ್ಮಿನ್ ಶಶಿಕುಮಾರ್, ನಮ್ಮ ಒಕ್ಕೂಟವು ಸಮಾಜದಲ್ಲಿ ತೀರಾ ಬಡತನದಲ್ಲಿರುವಂತಹ ಫಲಾನುಭವಿಗಳಿಗೆ ಪ್ರಯೋಜನ ವಾಗುವಂತಹ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಂಡು ಮುಂದುವರಿಯುತ್ತಾ ಬಂದಿದೆ ಎಂದು ಹೇಳಿದರು. ಇಂತಹ ಕಾರುಣ್ಯ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಪ್ರಸ್ತಾಪಿಸಿದಾಗಲೆಲ್ಲ ಒಕ್ಕೂಟದ ಸದಸ್ಯರು ಉದಾರ ಮನಸ್ಸಿನಿಂದ
ಸಹಕರಿಸುತ್ತಾ ಬರುತ್ತಿದ್ದಾರೆ ಎಂದು ದಾನಿಗಳ ಕೊಡುಗೆಯನ್ನು ಸ್ಮರಿಸಿಕೊಂಡರು.
ಕಳೆದ ಜೂನ್ ತಿಂಗಳಿನಲ್ಲಿ ಮಡಿಕೇರಿಯಲ್ಲಿ ನಡೆಸಿದ ಸಮ್ಮಿಲನ ಕಾರ್ಯಕ್ರಮದ ಬಳಿಕ ಒಕ್ಕೂಟದಲ್ಲಿ ಹೊಸ ಚೈತನ್ಯ ಮೂಡಿದೆ. ಸದಸ್ಯರುಗಳಲ್ಲಿ ಹೆಚ್ಚಿನ ಹುರುಪು ಉಲ್ಲಾಸ ಕಾಣಿಸಿಕೊಂಡಿದೆ ಎಂದರು.
ನಾವು ನಡೆಸುತ್ತಿರುವ ಜನೋಪಯೋಗಿ ಕಾರ್ಯಕ್ರಮಗಳನ್ನು ಮೆಚ್ಚಿ ಸ್ವಯಂ ಪ್ರೇರಿತರಾಗಿ ಪ್ರತಿಮಾಸ ಮೊತ್ತವನ್ನು ಒಕ್ಕೂಟಕ್ಕೆ ನೀಡಲು ಮುಂದೆ ಬಂದ ಸದಸ್ಯರುಗಳಿದ್ದಾರೆ ಎಂದ ಶಶಿಕುಮಾರ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊಡುಗೈ ದಾನಿ ಕವಿತಾ ರಮೇಶ್ ಅವರನ್ನು ಉದಾಹರಿಸಿದರು.
ಒಕ್ಕೂಟದ ಅಡ್ಮಿನ್ ನಿವೃತ್ತ ಮೇಜರ್ ಡೇವಿಡ್ ವೇಗಸ್ ಮಾತನಾಡಿ, ಮುಂದೆ ಕೂಡ ಆಶ್ರಮದ ಹಿರಿಯರಿಗೆ ನಮ್ಮ ಒಕ್ಕೂಟದಿಂದ ಸಾಧ್ಯವಾಗುವ ಸಹಕಾರವನ್ನು ನೀಡುವುದಾಗಿ ಭರವಸೆಯಿತ್ತು, ಫಲಾನುಭವಿಗಳಿಗೆ ಶುಭ ಹಾರೈಸಿದರು.
ಒಕ್ಕೂಟದ ಸ್ಥಾಪಕ ಅಡ್ಮಿನ್ ಅನಿಲ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ದಾನಿಗಳಾದ ಕವಿತಾ ರಮೇಶ್ ಮಾತನಾಡಿ, ಒಕ್ಕೂಟದ ಕೆಲಸ ಕಾರ್ಯಗಳು ನಿಜಕ್ಕೂ ಮೆಚ್ಚುವಂತದ್ದಾಗಿದ್ಧು , ತನ್ನ ಸಹಕಾರ ಸದಾ ಈ ಒಕ್ಕೂಟಕ್ಕೆ ಇದೆ ಎಂದು ಹೇಳಿದರು.
ಒಕ್ಕೂಟದ ಹಿರಿಯ ಅಡ್ಮಿನ್ ಎಂ.ಇ.ಮಹಮ್ಮದ್ ಮಾತನಾಡಿ, ಈ ಆಶ್ರಮದಲ್ಲಿರುವ ಎಲ್ಲ ಹಿರಿಯರ ಮನದಾಳದ ಪ್ರರ‍್ಥನೆ, ಒಕ್ಕೂಟದ ಎಲ್ಲ ಸದಸ್ಯರುಗಳ ಮೇಲಿರಲಿ ಎಂದು ವಿನಂತಿಸಿಕೊಂಡರು.
ಅಡ್ಮಿನ್ ಗಳಾದ ಪಿ.ಪಿ.ಸುಕುಮಾರ್ ಹಾಕತ್ತೂರು, ಲೀಲಾವತಿ ಮಡಿಕೇರಿ, ಕೆ.ಎಸ್.ಅನಿಲ್ ಕುಮಾರ್ ಸುಂಟಿಕೊಪ್ಪ, ಹನೀಫ್ ಸೋನ ಮಡಿಕೇರಿ
ಪ್ರತಿನಿಧಿಗಳಾದ ಗಾಯತ್ರಿ ನರಸಿಂಹ, ಖೈರುನ್ನಿಸ, ಜಾನ್ ಬೆನೆಟ್ ವಿಕಾಸ್ ಆಶ್ರಮದ ವಕ್ತಾರ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ಒಕ್ಕೂಟದ ಪ್ರಮುಖರು ಹಾಗೂ ಫಲಾನುಭವಿಗಳಿಗೆ ಚಳಿತಡೆಯುವ ಉಡುಪುಗಳನ್ನು ನೀಡಿದರು. ಅಡ್ಮಿನ್ ಮನ್ಸೂರ್ ಆಶ್ರಮದ ಕರ‍್ಯಕ್ರಮ ರೂಪಿಸಿದ ಬಗ್ಗೆ ಮಾತನಾಡಿ ಧನ್ಯವಾದ ಸಲ್ಲಿಸಿದರು.
ವಿಕಾಸ್ ಆಶ್ರಮದ ಮುಖ್ಯಸ್ಥರಾದ ರಮೇಶ್ ದಂಪತಿಗಳ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.