ಮಡಿಕೇರಿ ಜು.30 NEWS DESK : ಕೊಡಗಿನಲ್ಲಿ ಕ್ರೀಡೆಯ ಸ್ವಚ್ಛ ಆಡಳಿತಗಾರ, ಸಂಘಟನೆಗಾರ, ತರಬೇತುದಾರ ಹಾಗು ಬಂಗಾರದ ಹೆಜ್ಜೆ ಗುರುತು ಮೂಡಿಸಿದ ನಿಸ್ವರ‍್ಥ ಸೇವಕ ಎಂದರೆ ಅದು ಚೆಪ್ಪುಡೀರ ಸುಭಾಷ್ ಮುತ್ತಣ್ಣನವರು.
ಚೆಪ್ಪುಡೀರ ಅಪ್ಪಣ್ಣ ಹಾಗೂ ಬೊಳ್ಳಮ್ಮ (ತಾಮನೆ ಪಾಂಡಂಡ) ದಂಪತಿಗಳ ಪುತ್ರನಾಗಿ 20 ಜೂನ್ 1946 ರಂದು ಸುಭಾಷ್ ಮುತ್ತಣ್ಣನವರು ಜನಿಸಿದರು.
ವಿದ್ಯಾಭ್ಯಾಸ : ಮಡಿಕೇರಿ ರ‍್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲಹಾಬಾದ್ ನಲ್ಲಿ ಬಿ.ಎಸ್ಸಿ. ಅಗ್ರಿಕಲ್ಚರ್ ಪರ‍್ಣಗೊಳಿಸಿದರು.
ಕ್ರೀಡಾ ಸಾಧನೆ : ಅಲಹಾಬಾದ್ ವಿಶ್ವವಿದ್ಯಾನಿಲಯಕ್ಕೆ ಬಾಸ್ಕೆಟ್ ಬಾಲ್, ಹಾಕಿ, ಅಥ್ಲೆಟಿಕ್ಸ್ ಹಾಗೂ ಬಾಸ್ಕೆಟ್ ಬಾಲ್ ಆಟದಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಾರೆ. ಇವರ 400 ಮೀಟರ್ ಹರ್ಡ್ಲ್ಸ್ ನ ದಾಖಲೆ ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಇನ್ನೂ ಇದೆ.
ಲಯನ್ಸ್ ಕ್ಲಬ್ : ಲೈನ್ಸ್ ಕ್ಲಬ್ ನ ಚರ‍್ಟೆಡ್ ಸದಸ್ಯರಾಗಿ 1973 ರಲ್ಲಿ ಸೇರುತ್ತಾರೆ. ನಂತರದ ದಿನಗಳಲ್ಲಿ ಕ್ಲಬ್ ನ ಅಧ್ಯಕ್ಷ, ವಲಯದ ಅಧ್ಯಕ್ಷ, ಜಿಲ್ಲಾಧ್ಯಕ್ಷ ಹಾಗೂ ಗರ‍್ನರ್ ಆಗಿ ಪದವಿಯನ್ನು ಅಲಂಕರಿಸುತ್ತಾರೆ.
ಲಯನ್ಸ್ ಶಾಲೆ ಪ್ರಾರಂಭ : 1980-81ರಲ್ಲಿ ಸುಭಾಷ್, ಮನೆಯಪಂಡ ಸುಬ್ಬಯ್ಯ(ಮಣಿ) ಹಾಗು ದಿವಂಗತ ಕೊಳ್ಳಿಮಾಡ.ಸಿ.ಮಂದಣ್ಣ ಲಯನ್ಸ್ ಶಾಲೆ ಪ್ರಾರಂಭಿಸಬೇಕೆಂದು ರ‍್ಚಿಸಿ, ಒಂದು ಸಂಗೀತ ರಸಮಂಜರಿಯನ್ನು ಪ್ರರ‍್ಶಿಸಿ ಅದರಿಂದ ಬಂದ ಹಣದಿಂದ ಮುಂದಿನ ಪೀಳಿಗೆಗೆ ಕ್ರೀಡೆ ಮತ್ತು ಶಿಕ್ಷಣ ಸಿಗಬೇಕೆಂಬ ದೂರ ದೃಷ್ಟಿಯಿಂದ ಈ ಶಾಲೆಯನ್ನು ಪ್ರಾರಂಭಿಸಲಾಯಿತು. ಇಂದು ಇದು ಜಾತಿ-ಮತ-ಭೇದವಿಲ್ಲದ ವಿದ್ಯಾದೇಗುಲವಾಗಿದೆ. ನೂರಾರು ಮಕ್ಕಳು ಈ ಶಾಲೆಯಲ್ಲಿ ಓದಿ ಇಂದು ಜೀವನ ರೂಪಿಸಿಕೊಂಡಿದ್ದಾರೆ. ಇಲ್ಲಿನ ವಿದ್ಯರ‍್ಥಿಗಳು ಕ್ರೀಡೆಯಲ್ಲಿ ಕುಗ್ರಾಮದಿಂದ ಬಂದು ಒಲಂಪಿಕ್ಸ್ ನ ವರೆಗೆ ಭಾರತದ ಬಾವುಟ ಆರಿಸಿದ್ದಾರೆ. ಇಂದು ದಾನದಲ್ಲಿ ಶ್ರೇಷ್ಠವಾದ ವಿದ್ಯಾದಾನದೊಂದಿಗೆ ಹೆಮ್ಮರವಾಗಿ ಲಯನ್ಸ್ ಶಾಲೆ ಬೆಳೆದು ನಿಂತಿದೆ. ಲಕ್ಷಗಟ್ಟಲೆ ಜನ ಇದರಿಂದ ಆಶ್ರಯ ಪಡೆದಿದ್ದಾರೆ ಎಂದರೆ ತಪ್ಪಾಗಲಾರದು. ಈ ಶಾಲೆಯಲ್ಲಿ ಆಸ್ಟ್ರೋ ರ‍್ಫನ್ನು ಕೂಡ ಅಳವಡಿಸಲಾಗಿದೆ.
ಹಾಕಿಯಲ್ಲಿ 2 ಒಲಂಪಿಕ್ಸ್ ಆಡಿದ ಆಟಗಾರರಾದ ವಿ.ಆರ್.ರಘುನಾಥ್ ಹಾಗೂ ಸಣ್ಣುವಂಡ.ಕೆ.ಉತ್ತಪ್ಪ, ಅಂತರಾಷ್ಟ್ರೀಯ ಆಟಗಾರರಾದ ಮುಕ್ಕಾಟೀರ ಅಯ್ಯಪ್ಪ ಹಾಗೂ ಕುಪ್ಪಂಡ ಸೋಮಯ್ಯ, ಅಂತರಾಷ್ಟ್ರೀಯ ಕ್ರೀಡಾಪಟು ಸಿಂಚಲ್ ಇಂತಹ ಪ್ರತಿಭೆಗಳನ್ನು ಹೊರತಂದರು. 2012ರಲ್ಲಿ ಲಂಡನ್ ಒಲಂಪಿಕ್ಸ್ ನಡೆಯುವಾಗ ಶುಭಾಷ್ ಅವರು ಖುದ್ದಾಗಿ ಭಾರತ ತಂಡದ ಪರ ಆಡುತ್ತಿದ್ದ ರಘುನಾಥ್ ಹಾಗೂ ಉತ್ತಪ್ಪ ಅವರ ಆಟವನ್ನು ವೀಕ್ಷಿಸಿದರು.
ಕೂರ್ಗ್ ಹಾಕಿ ಸಂಸ್ಥೆ : 9 ವರ್ಷಗಳ ಕಾಲ ಅಧ್ಯಕ್ಷರಾಗಿ ಹಾಕಿ ಸಂಸ್ಥೆಯನ್ನು ಮುನ್ನಡೆಸಿದರು. ಕೆ.ಎಸ್.ಎಚ್.ಎ ಯ ಉಪಾಧ್ಯಕ್ಷರು ಕೂಡ ಆಗಿದ್ದರು. ಆ ಸಮಯದಲ್ಲಿ ಕೊಡಗು ತಂಡ ಸಿ-ಡಿವಿಷನ್ ನಿಂದ ಎ-ಡಿವಿಷನ್ ವರೆಗೆ ಬೆಂಗಳೂರಿನ ಲೀಗ್ ನಲ್ಲಿ ಉತ್ತರ‍್ಣಗೊಂಡರು. ಮದ್ರಾಸ್ ನಲ್ಲಿ ಕೊಡಗಿನ ತಂಡ ಎಂ.ಸಿ.ಸಿ ಪಂದ್ಯಾವಳಿಯಲ್ಲಿ ಆಡಿದರು. ರಂಗಸ್ವಾಮಿ ಕಪ್ ನ್ಯಾಷನಲ್ಸ್ ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ನಡೆಸಿದರು. ಇನ್ವಿಟೇಶನ್ ಟೂರ್ನಮೆಂಟ್ ಗಳಾದ ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮರ‍್ಷಲ್ ಕರ‍್ಯಪ್ಪ ಆಲ್ ಇಂಡಿಯಾ ಟೂರ್ನಮೆಂಟ್ ಗಳನ್ನು ಮಡಿಕೇರಿಯಲ್ಲಿ ನಡೆಸಿದರು. ಇವರ ಸಮಯದಲ್ಲಿ ಮಡಿಕೇರಿಗೆ ಆಸ್ಟ್ರೋ ರ‍್ಫ್ ಅನ್ನು ಅಳವಡಿಸಲಾಯಿತು. ನೆಸ್ಲೆ ಕಪ್ ಅನ್ನು ಕೊಡಗಿನಾದ್ಯಂತ ನಡೆಸಿದರು. 5 ಅತಿಥೇಯ ಆಟಗಾರರನ್ನು ಆಡಿಸುವ ನಿಯಮವನ್ನು ಕರ‍್ಯರೂಪಕ್ಕೆ ತಂದರು. ಹಾಕಿ ತೀರ್ಪುಗಾರರಿಗೆ ಶಿಬಿರಗಳನ್ನು ಏರ್ಪಡಿಸಲಾಯಿತು.
B.B.C ಕ್ಲಬ್ : 49 ವರ್ಷಗಳ ಹಿಂದೆ ಚೆಪ್ಪುಡೀರ ತಮ್ಮಿ ಮಾದಯ್ಯ ಅವರ ಜೊತೆಗೂಡಿ ಬಾಸ್ಕೆಟ್ ಬಾಲ್ ಕ್ಲಬ್ ಸಂಸ್ಥೆಯನ್ನು ಸ್ಥಾಪಿಸಿದರು. ಇದರಡಿಯಲ್ಲಿ ಬಾಸ್ಕೆಟ್ ಬಾಲ್ ಹಾಗೂ ಹಾಕಿ ಶಿಬಿರಗಳನ್ನು ಆಯೋಜಿಸಿದೊಡಗಿದರು. ಬಾಸ್ಕೆಟ್ ಬಾಲ್ ನಲ್ಲಿ ಹೆಸರಾಂತ ರಾಜ್ಯ ಆಟಗಾರರಾದ ಕೆಚ್ಚೆಟೀರ ರವಿ, ಚೆರಿಯಂಡ ವಿಶ್ವನಾಥ್, ಬಾಳೆಯಡ ಉತ್ತಯ್ಯ, ಗೌರು ಪಳಂಗಂಡ ವಾಣಿ, ಜ್ಯೋತಿ, ರಾಣಿ ಮತ್ತು ಹಾಕಿಯಲ್ಲಿ ಒಲಂಪಿಯನ್ ಬಾಳೆಯಡ ಸುಬ್ರಮಣಿ, ಅಂತರಾಷ್ಟ್ರೀಯ ಆಟಗಾರ ಬುಟ್ಟಿಯಂಡ ಚಂಗಪ್ಪ ಹಾಗು ಹಲವಾರು ಉದಯೋನ್ಮುಖ ಆಟಗಾರರನ್ನು ಹೊರತಂದರು. ಇಂದು ಇದು ಕೊಡಗಿನಲ್ಲೇ ಪುರಾತನ ಹಾಕಿ ಸಂಸ್ಥೆ ಎಂದು ಹೆಸರುವಾಸಿಯಾಗಿದೆ. ಉಣ್ಣಿಕೃಷ್ಣನ್ ಹಾಗು ಡಿಕ್ರೂಸ್ ಅವರಂತಹ ತರಬೇತುದಾರರನ್ನು ಕರೆತಂದು ಶಿಬಿರಗಳಲ್ಲಿ ಆಟಗಾರರಿಗೆ ತರಬೇತಿ ನೀಡಿದರು. ಈ ರ‍್ಷ ಬಿರುನಾಣಿನಲ್ಲಿ ಬೇಸಿಗೆ ಶಿಬಿರವನ್ನು ನಡೆಸಿದ್ದು, ಮುಂಬರುವ ದಿನಗಳಲ್ಲಿ ರ‍್ಕಾರಿ ಶಾಲಾ ಮಕ್ಕಳಿಗೆ ಶಿಬಿರಗಳನ್ನು ನಡೆಸುವ ಉದ್ದೇಶವನ್ನು ಹೊಂದಿದ್ದಾರೆ.
ಪ್ರಶಸ್ತಿಗಳು : ಅಂತರರಾಷ್ಟ್ರೀಯ ಅಧ್ಯಕ್ಷರ ನಾಯಕತ್ವದ ಪ್ರಶಸ್ತಿ, ಕೊಡಗು ಪ್ಲಾಂಟ್ರ‍್ಸ್ ಅಸೋಸಿಯೇಷನ್ ಅಧ್ಯಕ್ಷರು, ಉಪಾಸಿ ಸ್ಪರ‍್ಟ್ಸ್ ಕ್ಲಬ್ ಅಧ್ಯಕ್ಷರು, ಚರ‍್ಮನ್ ಆಫ್ ಚಿಸಾಯಿರ್ ಹೋಂ, ಬೆಸ್ಟ್ ಜೋನಲ್ ಚರ‍್ಮನ್, ಕರ‍್ಗ್ ಎಜುಕೇಷನ್ ಸೊಸೈಟಿ ಹಾಗೂ ನಾನಾ ಸಂಸ್ಥೆಗಳಲ್ಲಿ ಪ್ರಮುಖವಾಗಿ ಕೆಲಸ ಮಾಡಿದ್ದಾರೆ.
ಸ್ನೇಹ ಮಿಲನ : ಇತ್ತೀಚೆಗೆ B.B.C ಯ ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಗೋಣಿಕೊಪ್ಪದ ಸಭಾಂಗಣದಲ್ಲಿ ಸುಭಾಷ್ ಮುತ್ತಣ್ಣ ಅವರನ್ನು ಸನ್ಮಾನಿಸಿದರು. ಅವರ ವ್ಯಕ್ತಿತ್ವ, ಅವರು ನಡೆದು ಬಂದ ಹಾದಿ ಎಲ್ಲವನ್ನು ಗುಣಗಾನ ಮಾಡಿದರು. ಹಿರಿಯರಾದ ಪುಚ್ಚಿಮಾಡ ಹರೀಶ್, ಮುಂಡುಮಾಡ ರಾಮು ಹಾಗೂ ಬಹಳಷ್ಟು B.B.C ಯ ಸದಸ್ಯರು ಜೊತೆಗೂಡಿ ಸುಭಾಷ್ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಸುಭಾಷ್ ಅವರುB.B.C ಸಂಸ್ಥೆಯನ್ನು ಮುನ್ನಡೆಸಲು ಬಾಳೆಯಡ ಸುಬ್ರಮಣಿ ಅವರು ಸೂಕ್ತವಾದ ವ್ಯಕ್ತಿ ಎಂದು ನೋಡಿದರು.
ಸರಳ-ಸಜ್ಜನ ವ್ಯಕ್ತಿ, ಎಲ್ಲರ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಹಾಗೂ ಪ್ರತಿಯೊಬ್ಬ ಆಟಗಾರರಿಗೂ ಗೌರವ ನೀಡುವ ಅದ್ಭುತ ವ್ಯಕ್ತಿ. ಇವರ ಪತ್ನಿ ಕುಸುಮ(ತಾಮನೆ ಅಜ್ಜಿಕುಟ್ಟೀರ), ಮಕ್ಕಳಾದ ಶೀತಲ್ ಹಾಗೂ ಅಪ್ಪಣ್ಣ ಅವರೊಂದಿಗೆ ಹೊಸೂರು ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ವ್ಯಕ್ತಿತ್ವವನ್ನು ಬಹಳಷ್ಟು ಆಟಗಾರರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಿ ಹಾಗೂ ಭಗವಂತನು ಇವರಿಗೆ ಒಳ್ಳೆಯ ಆರೋಗ್ಯವನ್ನು ಕೊಡಲಿ ಎಂದು ಆಶಿಸುತ್ತೇನೆ.
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ