ಸೋಮವಾರಪೇಟೆ ಜು.30 NEWS DESK : ಸೋಮವಾರಪೇಟೆ ಪುಷ್ಪಗಿರಿ ಜೆಸಿಐ ವತಿಯಿಂದ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರನ್ನು ಸನ್ಮಾನಿಸಲಾಯಿತು.ಸೋಮವಾರಪೇಟೆ ಜಾನಕಿ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಜೇಸಿ ಮಹಿಳಾ ಸಮ್ಮೇಳನದಲ್ಲಿ ಜೆಸಿಐ ಪ್ರಮುಖರು ರವೀಂದ್ರ ಅವರನ್ನು ಸನ್ಮಾನಿಸಿ ಗೌರವಿಸಿದರು. ಜೆಸಿಐ ವಲಯಯಾಧ್ಯಕ್ಷೆ ಆಶಾ ಜೈನ್, ವಲಯ ಮಹಿಳಾ ಘಟಕದ ಅಧ್ಯಕ್ಷೆ ರೂಪ ಗೋಪಾಲಕೃಷ್ಣ, ರಾಷ್ಟ್ರೀಯ ಮಹಿಳಾ ಸಂಯೋಜಕಿ ಯಶಸ್ವಿನಿ, ಸೋಮವಾರಪೇಟೆ ಘಟಕದ ಅಧ್ಯಕ್ಷ ಎಸ್.ಆರ್.ವಸಂತ್, ಜೆಎಸಿ ವಲಯಾಧ್ಯಕ್ಷ ರಂಗಸ್ವಾಮಿ, ಕಾನೂನು ವಿಭಾಗದ ಸೌಜನ್ಯ ಹೆಗಡೆ, ವಲಯಾ ಉಪಾಧ್ಯಕ್ಷೆ ಮಾಯಾ ಗಿರೀಶ್, ಯುವ ಜೆಸಿ ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಮತ್ತಿತರ ಗಣ್ಯರು ಹಾಜರಿದ್ದರು.







