ಸುಂಟಿಕೊಪ್ಪ ಜು.31 NEWS DESK : ನಂಜರಾಯಪಟ್ಟಣ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಸ್.ಡಿ.ಉದಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿ.ಜಿ.ಲೋಕೇಶ್ ನೇಮಕಗೊಂಡಿದ್ದಾರೆ.ನಂಜರಾಯಪಟ್ಟಣ ಪ್ರೌಢಶಾಲಾ ಸಭಾಂಗಣದಲ್ಲಿ ವಿದ್ಯಾ ಸಂಘದ ವತಿಯಿಂದ ನಡೆದ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಹಾಜರಿದ್ದ ಹಳೆಯ ವಿದ್ಯಾರ್ಥಿಗಳ ನಿರ್ದೇಶಕರುಗಳ ಪೈಕಿ ಉಪಾಧ್ಯಕ್ಷರಾಗಿ ಕೆ.ಟಿ.ಹರೀಶ್, ಖಜಾಂಚಿಯಾಗಿ ಕೆ.ಎ.ಅನೀಸ್, ನಿರ್ದೇಶಕರುಗಳಾಗಿ ಉಳುವಾರನ ಶಿವಕುಮಾರ್, ಸಿ.ಜೆ.ವಿಜೇಶ್, ಸೂರ್ಯಕುಮಾರ್, ಬೆಳ್ಳಿಯಪ್ಪ, ಪವನ್ ಚಿಂಟು, ಸಂದೀಪ್, ಆರಿಸ್, ಎ.ಪಿ.ಬಾಲಕೃಷ್ಣ, ಕೆ.ಜಿ.ದೇವಯ್ಯ, ಪ್ರಸನ್ನ ಹಾಗೂ ಹೆಚ್.ಕೆ.ಪ್ರಸಾದ್ ಅವರುಗಳನ್ನು ಆಯ್ಕೆ ಮಾಡಲಾಯಿತು.










