ಕೊಡಗು ಜಿ.ಪಂ, ಕುಶಾಲನಗರ ತಾ.ಪಂ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಗಳ ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ” ವಿಶ್ವ ಸ್ತನ್ಯಪಾನ ಸಪ್ತಾಹ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿಯ ಎದೆಹಾಲು ಹಾಲನ್ನು ಮಗುವಿಗೆ ಕುಡಿಸುವುದರಿಂದ ತಾಯಿ ಮಗುವಿನಬಾಂಧವ್ಯ ಹೆಚ್ಚಿ, ಮಗುವಿನ ರೋಗನಿರೋಧಕ ಶಕ್ತಿಯೂ ವೃದ್ಧಿಸುತ್ತದೆ ಎಂದು ಡಾ.ಶಿವಕುಮಾರ್ ಹೇಳಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ್ ಮಾತನಾಡಿ, ತಿಂಗಳವರೆಗೆ ಮಗುವಿಗೆ ತಾಯಿ ಹಾಲು ಹೊರತಾಗಿ ಬೇರೇನೂ ಕುಡಿಸಬಾರದು
ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಧುಸೂದನ್, ಶಾಲಾ ಮಕ್ಕಳ ಆರೋಗ್ಯ ತಪಾಸಣಾ ಘಟಕದ ವೈದ್ಯರಾದ ಡಾ.ಮೇಲಪ್ಪ, ಡಾ.ನಿವೇದಿತಾ, ಡಾ.ಭರತ್, ತಾಲ್ಲೂಕು ಆರೋಗ್ಯಾಧಿಕಾರಿ ಹೆಚ್.ಕೆ.ಶಾಂತಿ, ಶುಶ್ರೂಷಕಿ ಇಂದಿರಾ ಹಾಜರಿದ್ದರು.