
ಸೋಮವಾರಪೇಟೆ NEWS DESK ಆ.5 : ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಶಾಂತಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ 9ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಮಹಿಳೆಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗ್ಯ ಟೀಮ್ ಪ್ರಥಮ ಹಾಗೂ ಮಸಗೋಡು ಮಹಿಳೆಯರ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ವಾಲಿಬಾಲ್‌ನಲ್ಲಿ ಕೂಗೂರ್ ಬಾಯ್ಸ್ ತಂಡ (ಪ್ರ) ತಾಕೇರಿ ತಂಡ (ದ್ವೀ) ಪುರುಷರ ಹಗ್ಗಜಗ್ಗಾಟದಲ್ಲಿ ಸಂಪಾಜೆ ತಂಡ (ಪ್ರ),ಸೋಮವಾರಪೇಟೆ ರಾಕ್‌ಸ್ಟಾರ್ ತಂಡ(ದ್ವಿ) ಮಹಿಳೆಯರ ಹಗ್ಗಾಜಗ್ಗಾಟದಲ್ಲಿ ಹಾನಗಲ್ಲು ಗ್ರಾಮದ ಸರಸ್ವತಿ ಯುವತಿ ಮಂಡಳಿ(ಪ್ರ), ಶಾಂತಳ್ಳಿ ಕುಮಾರಲಿಂಗೇಶ್ವರ ಯುವತಿ ಮಂಡಳಿ (ದ್ವಿ) ಸ್ಥಾನಪಡೆಯಿತು. ಪ್ರೇಕ್ಷಕರನ್ನು ರಂಜಿಸಿದ ಗಂಡಹೆAಡತಿ ಓಟದಲ್ಲಿ ಮೂದ್ರವಳ್ಳಿ ಗ್ರಾಮದ ಪೂಜಾ ರಾಕೇಶ್ ಪ್ರಥಮ, ಶಾಂತಳ್ಳಿ ಲೇಖಾ ಕುಮಾರ್ ದ್ವಿತೀಯ ಸ್ಥಾನ ಪಡೆದರು. ಕೆಸರುಗದ್ದೆ ಓಟದ ಮಹಿಳೆಯರ ವಿಭಾಗದಲ್ಲಿ ಶಾಂತಳ್ಳಿ ಜಯಪ್ರಧ ಮೇದಪ್ಪ(ಪ್ರ), ಡಾ.ಅಮೂಲ್ಯ(ದ್ವಿ), ಪುರುಷರ ವಿಭಾಗದಲ್ಲಿ ವಿಕ್ರಂ ಸಾಗರ್(ಪ್ರ), ಎಚ್.ಡಿ.ತೇಜಸ್ವಿ(ದ್ವಿ) ವಯಸ್ಕರ ಮಹಿಳೆಯರ ವಿಭಾಗದಲ್ಲಿ ಹರ್ಷಿತ್(ಪ್ರ), ನಿಶಾ, ಮತ್ತು ವಿದ್ಯಾ (ದ್ವಿ), ಪುರುಷರ ವಿಭಾಗದಲ್ಲಿ ಸುನಿಲ್ ಕುಶಾಲಪ್ಪ (ಪ್ರ), ಎಂ.ಎಸ್.ರಾಜಶೇಖರ್(ದ್ವಿ) ಸ್ಥಾನ ಪಡೆದರು. ಪ್ರಾಥಮಿಕ ಶಾಲೆಯ ಬಾಲಕಿಯರ ಓಟದ ಎರಡು ವಿಭಾಗದಲ್ಲಿ ಲಿಶಾನ್ ಮತ್ತು ಅನನ್ಯ(ಪ್ರ), ನಮನಗೌಡ ಮತ್ತು ಕೃತಿಕಾ(ದ್ವಿ), ಬಾಲಕರ ಎರಡು ವಿಭಾಗದಲ್ಲಿ ಚಿರಾಗ್ ಮತ್ತು ಶಮಿಕ್(ಪ್ರ), ಜನಿಕ್ ಮತ್ತು ಇಂದ್ರೇಶ್(ದ್ವಿ), ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಚಂದ್ರಶೇಖರ್(ಪ್ರ), ಅಶಿಕ್ ಕಾರ್ಯಪ್ಪ(ದ್ವಿ), ಬಾಲಕಿಯರ ವಿಭಾಗದಲ್ಲಿ ಧನ್ಯ(ಪ್ರ), ಮೌಲ್ಯ(ದ್ವಿ), ಪಿಯುಸಿ ಬಾಲಕಿಯರ ವಿಭಾಗದಲ್ಲಿ ಜೀವಿತ(ಪ್ರ), ಹಸ್ತವಿ(ದ್ವಿ), ಬಾಲಕರ ವಿಭಾಗದಲ್ಲಿ ಚೇತನ್(ಪ್ರ), ದೀಪಕ್ ದ್ವಿತೀಯಾ ಸ್ಥಾನ ಪಡೆದರು. ತಾಲ್ಲೂಕು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಕೆ.ಬಿ.ಸುರೇಶ್, ಸ್ಥಾಪಕ ಅಧ್ಯಕ್ಷ ಬಿ.ಜೆ.ದೀಪಕ್, ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಒಕ್ಕೂಟದ ಉಪಾಧ್ಯಕ್ಷ ಗೌಡಳ್ಳಿ ಪೃಥ್ವಿ, ಕಾರ್ಯದರ್ಶಿ ಚೌಡ್ಲು ಯೋಗೇಂದ್ರ ಬಹುಮಾನ ವಿತರಿಸಿದರು.









