ನಾಪೋಕ್ಲು ಆ.6 NEWS DESK : ನಾಪೋಕ್ಲುವಿನ ಇಂದಿರಾನಗರದ ವಿವೇಕಾನಂದ ಸಂಘದ ವತಿಯಿಂದ 19ನೇ ವರ್ಷದ ಗೌರಿ-ಗಣೇಶೋತ್ಸವದ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು. ಇಂದಿರಾನಗರದಲ್ಲಿ ಸಂಘದ ಅಧ್ಯಕ್ಷ ಸುದೀಪ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್ ಮತ್ತು ಮಾಜಿ ಸೈನಿಕ ಕೊಂಡಿರ ಗಣೇಶ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಯು.ಕೆ.ಶಶಿ, ಕಾರ್ಯದರ್ಶಿ ಸಂದೇಶ್, ಖಜಾಂಚಿ ಮತ್ತು ಉಸ್ತುವಾರಿ ಡಿ.ಆರ್.ಜಲೇಂದ್ರ. ನಿರ್ದೇಶಕರಾದ ಅನಿಲ್, ಗಣೇಶ್, ಪ್ರಕಾಶ್, ಪಟ್ಟಾಭಿ ಪ್ರಕಾಶ್ ಇನ್ನಿತರ ಸದಸ್ಯರು ಹಾಜರಿದ್ದರು.ವರದಿ : ದುಗ್ಗಳ ಸದಾನಂದ. 







