ಮಡಿಕೇರಿ NEWS DESK ಆ.6 : ಕೊಡಗು ಜಿಲ್ಲೆಯ ವಿವಿಧೆಡೆಯ ಭೂಕುಸಿತಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ಹಾಗೂ ಲ್ಯಾಂಡ್ ಸ್ಲೈಡ್ ಸಸ್ಪೆಕ್ಟಿಭವ್ ಮ್ಯಾಪಿಂಗ್ (Landslide suspectibility Mapping-LSM) ಗೆ ಸಂಬಂಧಪಟ್ಟಂತೆ ಮಡಿಕೇರಿಯ ಶಾಸಕ ಡಾ.ಮಂತರ್ ಗೌಡ ಅವರು ನಿರಂತರ ಟ್ವೀಟ್, ಮಾಧ್ಯಮ ಹೇಳಿಕೆ ಹಾಗೂ ಮನವಿಯ ಮೂಲಕ ಗಮನ ಸೆಳೆದ ನಂತರ ಜಿಯೋ ಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಲರ್ಟ್ ಆಗಿದ್ದು, ಮುಂದಿನ ವಾರ ಜಿಲ್ಲೆಗೆ ಭೇಟಿ ನೀಡಲಿದೆ. ಈಗಾಗಲೇ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬೂಕುಸಿತದ ಪ್ರದೇಶದ ಅಧ್ಯಯನಕ್ಕೆ ಜಿಯೋ ಲಾಜಿಕಲ್ ಸರ್ವೆ ಆಫ್ ಇಂಡಿಯಾ ಮುಂದಿನ ವಾರ ಮಡಿಕೇರಿಗೆ ಭೇಟಿ ನೀಡಲಿದೆ ಎಂದು ಮಾಹಿತಿ ನೀಡಿದ್ದಾರೆ. ಶಾಸಕ ಡಾ.ಮಂತರ್ ಗೌಡ ಅವರು ಸೂಕ್ತ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿ ವಿಷಯದ ಗಂಭೀರತೆಯನ್ನು ಮಂಡಿಸಿರುವುದು ಸ್ವಾಗತಾರ್ಹ. ಇಂದಿನ ಪರಿಸ್ಥಿತಿಯಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಅಗತ್ಯತೆಯನ್ನು ವಿವರಿಸಿದ್ದು, ಭೂಕುಸಿತದ ವಿಷಯದಲ್ಲಿ ಭವಿಷ್ಯದ ದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ ಹೊಸ ಮಾರ್ಗ ದೊರೆತಂತ್ತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ ಮತ್ತು ಶ್ಲಾಘಿಸಿದ್ದಾರೆ.