ಐಗೂರು NEWS DESK ಆ.6 : ಲೀಡ್ ಬ್ಯಾಂಕ್ ಕೊಡಗು ಮತ್ತು ನಬಾರ್ಡ್ ನ ಸಂಯುಕ್ತಾಶ್ರಯದಲ್ಲಿ ಐಗೂರಿನ ಬ್ಯಾಂಕ್ ಆಫ್ ಬರೋಡ ವತಿಯಿಂದ ಜನ ಸುರಕ್ಷ ಯೋಜನೆ ಕಾರ್ಯಕ್ರಮ ನಡೆಯಿತು. ಪ್ರಧಾನಮಂತ್ರಿ ಜನ್ ಧನ ಯೋಜನೆ ಮತ್ತು ಪ್ರಧಾನಮಂತ್ರಿ ಬೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಆರ್ಥಿಕ ಸಾಕ್ಷರತಾ ಸಮಾಲೋಚಕರಾದ ದಿವ್ಯಾ ಬಿ.ಸಿ ಹಾಗೂ ಹರೀಶ್ ಸಿ.ಜಿ ಅವರು ಗ್ರಾಹಕರಿಗೆ ವಿವರಿಸಿದರು. ಸಾಮಾನ್ಯ ಜನರಿಗೂ ಬ್ಯಾಂಕ್ ನ ಎಲ್ಲಾ ಯೋಜನೆಗಳ ಸೌಲಭ್ಯಗಳು ದೊರಕಬೇಕು ಎಂದರು. ಸೈಬರ್ ಕ್ರೈಮ್ ಬಗ್ಗೆ ತಿಳಿಸಲಾಯಿತು. ಐಗೂರಿನ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನ ವ್ಯವಸ್ಥಾಪಕ ಪಯಾಪಲ್ಲಿ ಆನಂದ್ ಬಾಬು ಹಾಗೂ ಬ್ಯಾಂಕ್ ನ ಸಿಬ್ಬಂದಿಗಳು ಹಾಗೂ ಗ್ರಾಹಕರು ಭಾಗವಹಿಸಿದ್ದರು.







