2023-24 ಮತ್ತು 2024-25ನೇ ಸಾಲಿನಿಂದ ಶಿಷ್ಯವೇತನಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಮೊಬೈಲ್, ವಿಡಿಯೋ ಚಿತ್ರೀಕರಣದ ಮೂಲಕ ಆಯ್ಕೆ ಮಾಡಲು ಅಕಾಡೆಮಿ ತೀರ್ಮಾನಿಸಿದೆ. ಶಿಷ್ಯವೇತನ ಅರ್ಜಿಗಳ ಬಗ್ಗೆ ಮಾಹಿತಿಯನ್ನು ಅಕಾಡೆಮಿ ಪೇಸ್‍ಬುಕ್ (face book: com/karnatakasangeeta1978) ಮೂಲಕ ಪಡೆದು ವೆಬ್‍ಸೈಟ್ sangeetanrityaacademy.karnataka.gov.in ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಇನ್ನು ಮುಂದೆ ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ಮೊಬೈಲ್/ ವಿಡಿಯೋ ಚಿತ್ರೀಕರಿಸಿ, ಪೆನ್‍ಡ್ರೈವ್‍ನಲ್ಲಿ ಅಳವಡಿಸಿ, ಪೆನ್‍ಡ್ರೈವ್‍ನೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ಕಾರ್ಯಾಲಯಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಈ ರೀತಿಯಾಗಿ ಬಂದ ಅರ್ಜಿಗಳನ್ನು ಆಯಾಯ ಕಲಾ ಪ್ರಕಾರಕ್ಕೆ ಅನುಗುಣವಾಗಿ ತೀರ್ಪುಗಾರರು ಅಭ್ಯರ್ಥಿಗಳು ಚಿತ್ರೀಕರಿಸಿ, ಕಳುಹಿಸಿಕೊಟ್ಟಿರುವ ಪೆನ್‍ಡ್ರೈವ್ ಅನ್ನು ಪರಿಶೀಲಿಸಿ, ಶಿಷ್ಯವೇತನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಪಠ್ಯಕ್ರಮ ಚಿತ್ರೀಕರಿಸಿದ ಪೆನ್‍ಡ್ರೈವ್‍ನೊಂದಿಗೆ ಅರ್ಜಿಯನ್ನು ಸ್ವೀಕರಿಸಲು ಆಗಸ್ಟ್, 12 ಕೊನೆಯ ದಿನವಾಗಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ. ಆಸಕ್ತ ಅರ್ಹ ಕಲಾವಿದರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಹಾಗೂ ಸಿಬ್ಬಂದಿಗಳನ್ನು ಕಚೇರಿ ವೇಳೆಯಲ್ಲಿ ಭೇಟಿ ಮಾಡಬಹುದು.