ಮಡಿಕೇರಿ ಆ.8 NEWS DESK : ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ನೀಡಲಾದ ಆಹಾರದ ಕಿಟ್ ಅನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಂತ್ರಸ್ತರಿಗೆ ವಿತರಿಸಲಾಯಿತು. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಸೋಮವಾರಪೇಟೆ ತಾಲೂಕಿನಲ್ಲಿ ಮನೆ ಕಳೆದುಕೊಂಡ ಹಾಗೂ ಹಾನಿಗೊಳಗಾದ ಮನೆಗಳ ಕುಟುಂಬಸ್ಥರಿಗೆ ವೇದಿಕೆಯ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ವಿತರಿಸಿದರು. ಈ ಸಂದರ್ಭ ಮಾತನಾಡಿದ ಫ್ರಾನ್ಸಿಸ್ ಡಿಸೋಜ ಜಿಲ್ಲೆಯಲ್ಲಿ ಮಳೆಯಿಂದ ಹಲವು ಮನೆಗಳು ಹಾನಿಯಾಗಿರುವ ಬಗ್ಗೆ ಆಶಾ ಕಿರಣ ಕಲಾ ಟ್ರಸ್ಟ್ ಅಧ್ಯಕ್ಷರಾದ ಮಾಲತಿ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಪಂದಿಸಿದ ಅವರು ಸುಮಾರು 27 ಕುಟುಂಬಸ್ಥರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದು, ಅದನ್ನು ವೇದಿಕೆಯ ಮೂಲಕ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು. ಅಲ್ಲದೇ ಮನವಿ ತಕ್ಷಣ ಸ್ಪಂದಿಸಿದಕ್ಕೆ ಧನ್ಯವಾದ ಅರ್ಪಿಸಿದರು. ಈ ಸಂದರ್ಭ ವೇದಿಕೆಯ ಪ್ರಮುಖರಾದ ಧೀವನ್ ಡಿಸೋಜಾ, ನಂದಿಗುದ್ದ ಗ್ರಾಮದ ವೇದ, ಚನ್ನಾಪುರ ಗ್ರಾಮದ ರತಿಶ್ ಪೂಜಾರಿ, ಬಿಟಿಕಟ್ಟೆ ಗ್ರಾಮದ ಟಿ.ಆರ್.ರಾಮಚಂದ್ರ ಹಾಗೂ ವಿಶ್ವ, ಪ್ರಸನ್ನ, ನಾಗರಾಜ್ ಇತರರು ಹಾಜರಿದ್ದರು.










