ನಾಪೋಕ್ಲು ಆ.16 NEWS DESK : ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯ ಬಕ್ಕದಲ್ಲಿ ವಿವಿಧ ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಊರಿನ ಹಿರಿಯರಾದ ನೆಯ್ಯಣಿರ ಕಮಲ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷ ಬೈತಡ್ಕ ಡೆಲ್ವಿ ದೇವಯ್ಯ, ಮಾಜಿ ಯೋಧ ಹೊಸೊಕ್ಲು ಮೊಣ್ಣಪ್ಪ, ಅಂಗನವಾಡಿ ಕಾರ್ಯಕರ್ತೆ ಶೈಲಜಾ, ಊರಿನ ಪ್ರಮುಖರು, ಅಂಗನವಾಡಿ ಮಕ್ಕಳು ಭಾಗವಹಿಸಿ ಪರಸ್ಪರ ಸಿಹಿ ಹಂಚಿ ಸ್ವಾತಂತ್ರ್ಯ ಹಬ್ಬವನ್ನು ಸಂಭ್ರಮಿಸಿದರು.
ವರದಿ : ದುಗ್ಗಳ ಸದಾನಂದ.










