ನಾಪೋಕ್ಲು ಆ.17 NEWS DESK : ಬಲ್ಲಮಾವಟಿ ದವಸ ಬಂಡಾರದ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ದವಸ ಬಂಡಾರದ ಆವರಣದಲ್ಲಿ ಮಾಜಿ ಸೈನಿಕ ನೆರವಂಡ ಭೀಮಯ್ಯ ಧ್ವಜಾರೋಹಣ ನೆರವೇರಿಸಿದರು. ದವಸ ಬಂಡಾರದ ಅಧ್ಯಕ್ಷರಾದ ಬೊಟ್ಟೋಳಂಡ ಜಾನಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭ ಉಪ ಅಧ್ಯಕ್ಷ ಕೋಟೆರ ಸುಬ್ಬಯ್ಯ, ಕಾರ್ಯದರ್ಶಿ ಭರತ್, ನಿರ್ದೇಶಕರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಿಹಿ ಹಂಚಿ ಸ್ವಾತಂತ್ರ್ಯ ಹಬ್ಬವನ್ನು ಸಂಭ್ರಮಿಸಿದರು..
ವರದಿ : ದುಗ್ಗಳ ಸದಾನಂದ.










