ಮಡಿಕೇರಿ ಆ.17 NEWS DESK : ಎಮ್ಮೆಮಾಡುವಿನ ಶಾದಿ ಮಹಾಲ್‌ನಲ್ಲಿ ಕೊಡಗು ಜಿಲ್ಲಾ ಸದಾತ್ ಸಂಗಮ ನಡೆಯಿತು. ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷ ಅಬ್ದುಲ್ ಅಜೀಜ್ ತಂಙಳ್ ಪಡಿಯಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯದ್ ಕಿಲ್ಲೂರ್ ತಂಙಳ್ ಉದ್ಘಾಟನಾ ಭಾಷಣ ಮಾಡಿದರು. ಅಬ್ದುಲ್ ಜಬ್ಬಾರ್ ಸಕಾಫಿ ಪಾತೂರು ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಮ್ಮೆಮಾಡು ಜಮಾತ್ ಅಧ್ಯಕ್ಷ ಅಬೂಬಕರ್ ಸಕಾಫಿ. ಪ್ರಮುಖರಾದ ಸೈಯದ್ ಅಬ್ದುಲ್ ಖಾದರ್ ತಂಙಳ್ ಅಯ್ಯಂಗೇರಿ, ಸಯ್ಯದ್ ಶರಫುದ್ದೀನ್ ತಂಙಳ್, ಸಯ್ಯದ್ ಇಸ್ಹಾಕ್, ಸೈಯದ್ ಅಬ್ದುಲ್ ಖಾದರ್ ತಂಙಳ್ ಅಯ್ಯಂಗೇರಿ, ಶಿಹಾ ಬುದ್ಧೀನ್ ತಂಙಳ್ ಗೋಣಿಕೊಪ್ಪ ಹಾಗೂ ವಿ.ಪಿ.ಎಸ್. ಮುತ್ತುಕೋಯ ತಂಙಳ್ ಸೇರಿದಂತೆ ಹಲವಾರು ಧಾರ್ಮಿಕ ನೇತಾರರು ಪಾಲ್ಗೊಂಡರು. ಸಯ್ಯದ್ ಇಲ್ಯಾಸ್ ತಂಙಳ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಸೈಯದ್ ಇಲ್ಯಾಸ್ ತಂಙಳ್, ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯದ್ ಅಬ್ದುಲ್ ಖಾದರ್ ತಂಙಳ್, ಖಜಾಂಚಿಯಾಗಿ ಸಯ್ಯದ್ ಶಿಹಾಬುದ್ದೀನ್ ತಂಙಳ್ ಹಾಗೂ ಇತರ ಸಮಿತಿಯನ್ನು ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.








