ಮಡಿಕೇರಿ NEWS DESK ಆ.23 : ಕುಶಾಲನಗರದ ವಿವಿಧ ಬಡಾವಣೆಗಳು, ಕೊಪ್ಪ ಮತ್ತು ಬೈಲುಕೊಪ್ಪ ಭಾಗದಲ್ಲಿ ಭೂಕಂಪನದ ಅನುಭವವಾಗಿದೆ. ಇಂದು ಬೆಳಿಗ್ಗೆ 6.25 ಗಂಟೆ ಸುಮಾರಿಗೆ 2 ರಿಂದ 3 ಸೆಕೆಂಡ್ ಗಳ ಕಾಲ ಭಾರೀ ಶಬ್ಧ ಕೇಳಿಸಿದೆ. ಕೆಲವರು ಇದು ಗುಡುಗಿನ ಶಬ್ಧ ಎಂದು ಭಾವಿಸಿದ್ದರಾದರೂ ಶಬ್ಧದ ತೀವ್ರತೆ ಮತ್ತು ಎಲ್ಲಾ ಭಾಗದಲ್ಲೂ ಒಂದೇ ರೀತಿಯ ಅನುಭವವಾದ ಕಾರಣ ಇದು ಭೂಕಂಪನದ ಶಬ್ಧ ಎಂದು ಚರ್ಚೆಯಾಗುತ್ತಿದೆ. ವಿಜ್ಞಾನಿಗಳು ಇನ್ನಷ್ಟೇ ನಿಖರವಾದ ಮಾಹಿತಿ ನೀಡಬೇಕಾಗಿದೆ.