ಮೈಸೂರು NEWS DESK ಆ.23 : ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಸ್ವಕ್ಷೇತ್ರ ಹುಣಸೂರಿಗೆ ಭೇಟಿ ನೀಡಿದರು.
ಹುಣುಸೂರು ತಾಲ್ಲೂಕಿನ ಗದ್ದಿಗೆಯ ಕೆಂಡಗಣ್ಣಸ್ವಾಮಿ ದೇವಾಲಯ, ಮೈಸೂರು ರಸ್ತೆಯ ಸಾಯಿಬಾಬ ಮಂದಿರ, ಕಲ್ಕುಣಿಕೆ ವೃತ್ತದ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಧರ್ಮಾಪುರ, ರತ್ನಪುರಿ, ಕೊಯಮುತ್ತೂರು ಕಾಲೋನಿ, ಸುಭಾಷ್‌ನಗರ ಮತ್ತು ಹುಣಸೂರಿನ ವಿಜಯನಗರ ಬಡಾವಣೆಯಲ್ಲಿ ಜನರಿಂದ ಸನ್ಮಾನ ಸ್ವೀಕರಿಸಿದರು. ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದ ಆರಾಧನಾ ಮಹೋತ್ಸವ ಮತ್ತು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದರು. ರಾಘವೇಂದ್ರಸ್ವಾಮಿಗಳ ಮಠದ ವತಿಯಿಂದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಹಾಗೂ ಶಾಸಕ ಹರೀಶ್ ಗೌಡರನ್ನು ಸನ್ಮಾನಿಸಲಾಯಿತು.