ಮಡಿಕೇರಿ ಆ.26 NEWS DESK : ವಿಶ್ವ ಹಿಂದು ಪರಿಷತ್ ಮಡಿಕೇರಿ ಗ್ರಾಮಾಂತರ ಘಟಕದ ವತಿಯಿಂದ ಮೂರ್ನಾಡಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. 6 ವರ್ಷದೊಳಗಿನ 67 ಪುಟಾಣಿಗಳು ಬಾಲಕೃಷ್ಣರಾಗಿ ಮಿಂಚಿದರು. ಮೂರ್ನಾಡಿನ ಗೌಡ ಸಮಾಜದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯ ಛದ್ಮವೇಷ ಸ್ಪರ್ಧೆಯಲ್ಲಿ ಪುಟಾಣಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳು ಶ್ರೀಕೃಷ್ಣನ ವೇಷಧಾರಿಗಳಾಗಿ ಮಿಂಚಲು ಪೋಷಕರು ಸಹಕರಿಸಿದರು. ಬಾಲಕೃಷ್ಣರ ಕಲರವ ಕಂಡು ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು.
::: ಛದ್ಮವೇಷ ವಿಜೇತರು :::ಎರಡೂವರೆಯಿಂದ ಮೂರೂವರೆ ವರ್ಷದೊಳಗಿನ ಮಕ್ಕಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಅವಿಶ್ ಬಿದ್ದಪ್ಪ, ದ್ವಿತೀಯ ಅನ್ವಿಕಾ ಕಾರ್ಯಪ್ಪ, ತೃತೀಯ ಸ್ಥಾನವನ್ನು ಚಿನ್ವಿತಾ ನಂದೀಶ್ ಗಳಿಸಿದರು.ಮೂರೂವರೆಯಿಂದ ನಾಲ್ಕೂವರೆ ವರ್ಷದೊಳಗಿನ ಮಕ್ಕಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಾನ್ವಿ, ದ್ವಿತೀಯ ಧನ್ವಿಕ್ ಪೂವಯ್ಯ, ತೃತೀಯ ಧ್ವನಿ, ನಾಲ್ಕೂವರೆಯಿಂದ ಆರು ವರ್ಷದೊಳಗಿನ ಮಕ್ಕಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮನಸ್ವಿ, ದ್ವಿತೀಯ ನೂತನ್ ಬಿ.ವೈ ಹಾಗೂ ತೃತೀಯ ಸ್ಥಾನ ದಿಯಾ ರೈ ಪಡೆದುಕೊಂಡರು. ಸ್ಪರ್ಧೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ನ ಬೌದಿಕ್ ಪ್ರಮುಖ್ ಚಿ.ನಾ.ಸೋಮೇಶ್, ಕೊಡಗು ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕೋಶಾಧ್ಯಕ್ಷ ಸಂಪತ್ ಕುಮಾರ್, ಪ್ರಸಾರ ಪ್ರಮುಖ್ ಶ್ಯಾನ್ ಸೋಮಣ್ಣ, ಕಾರ್ಯದರ್ಶಿ ರಮೇಶ್, ಸಹ ಕಾರ್ಯದರ್ಶಿಗಳಾದ ಯತೀಶ್, ಸಂತೋಷ್, ಮಾತೃಶಕ್ತಿ ಪ್ರಮುಖ್ ಉಮಾವತಿ, ವಿಶ್ವ ಹಿಂದು ಪರಿಷತ್ ಮೂರ್ನಾಡ್ ಘಟಕದ ಅಧ್ಯಕ್ಷ ಬಿ.ಸಿ.ಮೋಹನ್, ಎಬಿವಿಪಿ ನಿಕಟಪೂರ್ವ ಸಂಯೋಜಕ್ ಧನಂಜಯ್, ಜಿಲ್ಲಾ ಮಠ ಮಂದಿರ ಪ್ರಮುಖ್ ಮಹಾಬಲ್ಲೇಶ್ವರ್ ಭಟ್, ಸೇವಾ ಪ್ರಮುಖ್ ಪ್ರಭು ಆನಂದ, ಭಜರಂಗದಳದ ಪ್ರವೀಣ್, ಮಾತೃಶಕ್ತಿ ತಾಲ್ಲೂಕು ಪ್ರಮುಖ್ ಮಮತ ಕೊಂಪ್ಲಿ, ತಾಲ್ಲೂಕು ಸೇವಾ ಪ್ರಮುಖ್ ಮಮತ, ಶಿಕ್ಷಕರಾದ ಯಶಸ್ವಿನಿ ಮತ್ತಿತರರು ಉಪಸ್ಥಿತರಿದ್ದರು. ಮೂರ್ನಾಡು ಘಟಕದ ಕಾರ್ಯದರ್ಶಿ ದಿನೇಶ್ ಪೆಗ್ಗೋಲಿ ಸ್ವಾಗತಿಸಿ, ಜಿಲ್ಲಾ ಮಾತೃಶಕ್ತಿ ಸಹ ಸಂಯೋಜಕಿ ಪೂರ್ಣಿಮ ಸುರೇಶ್ ನಿರೂಪಿಸಿ, ಉಪಾಧ್ಯಕ್ಷ ಸಜೀವ ವಂದಿಸಿದರು.