ಮಡಿಕೇರಿ ಆ.26 NEWS DESK : ಭಾಗಮಂಡಲದ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ಆರಂಭವಾದ ಜಾನ್ ಡಾನ್ಸ್ ಗ್ಯಾಲರಿ ನೃತ್ಯ ಸಂಸ್ಥೆಯನ್ನು ಭಾಗಮಂಡಲ ಗ್ರಾ.ಪಂ ಅಧ್ಯಕ್ಷ ಕಾಳನ ರವಿ ಉದ್ಘಾಟಿಸಿ, ಶುಭಹಾರೈಸಿದರು. ಜಾನ್ ಡಾನ್ಸ್ ಗ್ಯಾಲರಿಯ ನಿರ್ದೇಶಕ ನಾಗರಾಜ್ ಸ್ವಾಗತಿಸಿ, ನೃತ್ಯ ಹಾಗೂ ಕರಾಟೆಯ ಮಹತ್ವವವನ್ನು ವಿವರಿಸಿದರು. ಬದುಕಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ಗೌರವವನ್ನು ತಂದುಕೊಡಬಲ್ಲ ಕಲೆಗಳು ನಮ್ಮ ಬದುಕಿನಲ್ಲಿ ಬೆರೆತಾಗ ಬದುಕಿಗೆ ಮಾನ್ಯತೆ ಬರುತ್ತದೆ. ಈ ನಿಟ್ಟಿನಲ್ಲಿ ನೃತ್ಯ ಹಾಗೂ ಕರಾಟೆಯು ಒಂದಾಗಿದ್ದು, ಇದು ಜಡತ್ವದಿಂದ ತುಂಬಿದ ವ್ಯಕ್ತಿಯ ಬದುಕಿನಲ್ಲಿ ನವಚೈತನ್ಯವನ್ನು ನೀಡಿ ಮನಸ್ಸನ್ನು ಮುದಗೊಳಿಸಿಸುತ್ತದೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿ.ಎಸ್.ಎಸ್.ಎನ್ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್, ಕಾವೇರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ದಾಮೋದರ್ ನಾಯ್ಕ, ರಾಜರಾಜೇಶ್ವರಿ ಶಾಲೆಯ ಮುಖ್ಯ ಅಧ್ಯಾಪಕ ಕವನ್, ಕರಾಟೆ ಮಾಸ್ಟರ್ ಕೆ.ಜೆ.ಇಮ್ಮಾನುವಲ್, ನೃತ್ಯ ಸಂಯೋಜಕರಾದ ಪೃಥ್ವಿ ನಾಯ್ಕ್, ಗಾಡ್ ವಿನ್ ದಿನಕರ್, ಸಹಾಯಕ ನೃತ್ಯ ಸಂಯೋಜಕರಾದ ಬೃಂದಾ ಕವನ್, ಕರಾಟೆ ತರಬೇತುದಾರರಾದ ರಾಯ್ ಜೋಸೆಫ್, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ಅನುಷಾ ಸತ್ಯ ನಾಥ್ ನೃತ್ಯ ಸ್ವಾಗತ ನೃತ್ಯ ಮಾಡಿದರು. ಕರಾಟೆ ವಿದ್ಯಾರ್ಥಿನಿ ಜಿತಿಕಾ ಪ್ರಾರ್ಥಿಸಿದರು. ಎನ್.ಎಸ್.ಪುಷ್ಪ ನಿರೂಪಿಸಿದರು. ಕಾವ್ಯ ವಂದಿಸಿದರು.