ಸಿದ್ದಾಪುರ ಆ.28 NEWS DESK : ಬೆಂಗಳೂರಿನ ಪ್ರತಿಷ್ಠಿತ ಯು.ಎಸ್.ಟಿ ಸಂಸ್ಥೆ ವತಿಯಿಂದ ನೂರಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉಚಿತ ಬ್ಯಾಗ್ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗಿದೆ ಎಂದು ಬೆಂಗಳೂರಿನ ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್ ಸಂಸ್ಥಾಪಕ ಜೈ ಕಿರಣ್ ತಿಳಿಸಿದ್ದಾರೆ. ವಿರಾಜಪೇಟೆ ತಾಲೂಕಿನ ವಿ.ಬಾಡಗ ಸರ್ಕಾರಿ ಶಾಲಾ ಸಭಾಂಗಣದಲ್ಲಿ ನಡೆದ ಬ್ಯಾಗ್ ಮತ್ತು ಲೇಖನಿ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುಎಸ್‍ಟಿ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕಿಟ್ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೈಕ್ಷಣಿಕ ಸಾಮಾಗ್ರಿಗಳನ್ನು ರಾಜ್ಯಾದ್ಯಂತ ವಿತರಿಸುತ್ತಾ ಬಂದಿದೆ. ಕೊಡಗು ಜಿಲ್ಲೆಗೂ ಸಂಸ್ಥೆ ಕೊಡುಗೆಯನ್ನು ನೀಡುತ್ತಿದೆ. ಬನವಾಸಿ ಕನ್ನಡಿಗರ ಸಂಸ್ಥೆ ಮೂಲಕ ನಮ್ಮ ಕೊಡಗು ತಂಡದ ಸಹಕಾರದೊಂದಿಗೆ ಸಂಕಷ್ಟದಲ್ಲಿರುವವರು ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವ ಪ್ರಯತ್ನ ಮಾಡಿದೆ ಎಂದರು. ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್ ನ ಪ್ರಮುಖರಾದ ಶಮಂತ್ ಹೊಸಹೂಳಲು ಮಾತನಾಡಿ ವಿರಾಜಪೇಟೆ ತಾಲೂಕಿನ ವಿ.ಬಾಡಗ, ಕಲ್ತೋಡು, ಕುಟ್ಟಂದಿ ಸೇರಿದಂತೆ ಕಾಡಂಚಿನಲ್ಲಿರುವ ಸುಮಾರು 150 ವಿದ್ಯಾರ್ಥಿಗಳಿಗೆ ಬ್ಯಾಗ್, ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ಪೊನ್ನಂಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕಿಶೋರ್ ನಾಚಪ್ಪ ಮಾತನಾಡಿ ಗ್ರಾಮೀಣ ಭಾಗದ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಬೆಂಗಳೂರಿನ ಸಂಸ್ಥೆ ಗುಣಮಟ್ಟದ ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೈಜೋಡಿಸುತ್ತಿರುವುದು ಹೆಮ್ಮೆಯ ವಿಚಾರ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸೌಲಭ್ಯಗಳನ್ನು ಪಡೆದುಕೊಂಡು ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು. ಮುಖ್ಯ ಶಿಕ್ಷಕಿ ಗೀತಾಂಜಲಿ ಮಾತನಾಡಿ ಗ್ರಾಮದ ಸುತ್ತಮುತ್ತಲಿನ ದಾನಿಗಳು ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಸಹಕಾರ ನೀಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಹಿಸುವ ಮೂಲಕ ಭವಿಷ್ಯ ರೂಪಿಸಲು ಮುಂದಾಗಬೇಕೆಂದರು. ವಿ.ಬಾಡಗ ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಂಜಿತಂಡ ಗಿಣಿ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬನವಾಸಿ ಕನ್ನಡಿಗರು ಟ್ರಸ್ಟ್ ನ ಕಿರಣ್ಮಯೀ ಶರ್ಮಾ, ನಿವೃತ್ತ ಶಿಕ್ಷಕಿ ಸೀತಮ್ಮ, ಕುಟ್ಟಂದಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಧರಣಿ, ಕಲ್ತೋಡು ಶಾಲೆಯ ಸಹ ಶಿಕ್ಷಕಿ ಸಾವಿತ್ರಿ, ಸಹ ಶಿಕ್ಷಕಿ ಕಾವೇರಮ್ಮ, ಪೋಷಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.