ಮಡಿಕೇರಿ NEWS DESK ಆ.30 : ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ತಣ್ಣಿಮಾನಿಯ ಶ್ರೀ ಭಗವತಿ ಯುವ ಮಂಡಳಿ ವತಿಯಿಂದ ಶ್ರೀ ಕಾವೇರಿ ಮಿನಿ ಮೆರಥಾನ್ ನಡೆಯಿತು. ಪುರುಷರ 5 ಕಿ.ಮೀ. ಮೆರಥಾನ್‌ಗೆ ಭಾಗಮಂಡಲದ ಮಾರುಕಟ್ಟೆಯ ಬಳಿಯಿಂದ ಮತ್ತು ಮಹಿಳೆಯರ ವಿಭಾಗದ 4 ಕಿ.ಮೀ. ಸ್ಪರ್ಧೆಗೆ ಪೊಲೀಸ್ ಠಾಣೆಯ ಬಳಿಯಿಂದ ಚಾಲನೆ ನೀಡಲಾಯಿತು. ಉತ್ಸಾಹಿ ಯುವಕರು ಹಾಗೂ ಯುವತಿಯರು ಮೆರಥಾನ್‌ನಲ್ಲಿ ಪಾಲ್ಗೊಂಡಿದ್ದರು. 75 ವರ್ಷದ ವೃದ್ದರೊಬ್ಬರು ಮೆರಥಾನ್ ನಲ್ಲಿ ಪಾಲ್ಗೊಂಡು ಗಮನ ಸೆಳೆದರು. ತಣ್ಣಿಮಾನಿಯಲ್ಲಿ ಮೆರಥಾನ್ ಮುಕ್ತಾಯಗೊಂಡಿತು. ತಣ್ಣಿಮಾನಿ ಗ್ರಾಮದ ಭಗವತಿ ದೇವಸ್ಥಾನ ಆವರಣದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಇದೇ ಸಂದರ್ಭ ನಡೆಯಿತು. ಸ್ಪರ್ಧೆಗಳಿಗೆ ಗ್ರಾಮಸ್ಥರೆ ಬಹುಮಾನ ಪ್ರ‍್ರಾಯೋಜಕರಾಗಿ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದ್ದು ವಿಶೇಷವಾಗಿತ್ತು. ಕ್ರೀಡಾಕೂಟದ ಮೆರಥಾನ್ ಸ್ಪರ್ಧೆಯನ್ನು ಪಾಂಡಿ ಭಾನುಪ್ರಕಾಶ್ ಹಾಗೂ ಕುದುಪಜೆ ಗಗನ್ ಕಟುಂಬಸ್ಥರು ಪ್ರಾಯೋಜಿಸಿದ್ದರು.











