ಉಡುಪಿ NEWS DESK ಆ.30 : ಪೊಲೀಸ್ ಇಲಾಖೆಯ ಹೆಮ್ಮೆಯ ಶ್ವಾನ ಐಕಾನ್ ನಿವೃತ್ತಿ ಹೊಂದಿದೆ. ಕಳೆದ 10 ವರ್ಷ 25 ದಿನಗಳಿಂದ ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನದಳದಲ್ಲಿ ಐಕಾನ್ ಸ್ಫೋಟಕ ಪತ್ತೆ ಕಾರ್ಯನಿರ್ವಹಿಸುತ್ತಿತ್ತು. ಸ್ಫೋಟಕ ಪತ್ತೆ ಬಗ್ಗೆ ಸಿ.ಎ.ಆರ್ ಸೌತ್ ಆಡುಗೋಡಿಯಲ್ಲಿ 9 ತಿಂಗಳು ಕಠಿಣ ತರಬೇತಿಯನ್ನು ಪಡೆದಿರುವ ಐಕಾನ್, ಲ್ಯಾಬ್ರಡಾರ್ ರಿಟ್ರೀವರ್ ತಳಿಯದ್ದಾಗಿದೆ. ಉಡುಪಿ ಜಿಲ್ಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸುಮಾರು 417 ಕ್ಕಿಂತ ಹೆಚ್ಚು ವಿಶೇಷ ಕರ್ತವ್ಯ ನಿರ್ವಹಿಸಿದೆ. ರಾಷ್ಟçಪತಿಗಳು, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರ ಆಗಮನದ ಸಂದರ್ಭ ಸ್ಫೋಟಕ ಪತ್ತೆ ಕಾರ್ಯನಿರ್ವಹಿಸಿ ದಕ್ಷತೆ ಮೆರೆದಿದೆ. 2014 ನವೆಂಬರ್ ತಿಂಗಳಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಐಕಾನ್ ಗೆ ಎಪಿಸಿ. ಗಣೇಶ ಎಂ. ಅವರು ಹ್ಯಾಂಡ್ಲರ್ ಆಗಿದ್ದರು. ಇಂದು ನಿವೃತ್ತಿಯಾದ ಐಕಾನ್ ನನ್ನು ಪೊಲೀಸ್ ಅಧಿಕಾರಿಗಳು ಕಚೇರಿಯಲ್ಲಿ ಸನ್ಮಾನಿಸಿ ಬೀಳ್ಕೊಟ್ಟರು.