ಭಾಗಮಂಡಲ NEWS DESK ಸೆ.1 : ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ನಾಪೋಕ್ಲು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ತೋರುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ವಿಭಾಗದ ಕಬಡ್ಡಿಯಲ್ಲಿ ಪ್ರಥಮ ಸ್ಥಾನ, ಹ್ಯಾಂಡ್ ಬಾಲ್‌ನಲ್ಲಿ ಪ್ರಥಮ, ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ಪ್ರಥಮ, ಹ್ಯಾಂಡ್ ಬಾಲ್ ಪ್ರಥಮ. ಥ್ರೋ ಬಾಲ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ವಸತಿ ಶಾಲೆಯ ಬಾಲಕಿಯರ ರಿಲೇ ಪ್ರಥಮ. ಬಾಲಕಿಯರ ಲಾಂಗ್ ಜಂಪ್‌ನಲ್ಲಿ ಕೀರ್ತನ ಪ್ರಥಮ, ಬಾಲಕರ ಲಾಂಗ್ ಜಂಪ್ ಆಶಿಕ್ ದ್ವಿತೀಯ, ಹೈಜಂಪ್ ಆಶಿಕ್ ಪ್ರಥಮ, 400 ಮೀ. ಓಟ ಪ್ರಧಾನ್ ಪ್ರಥಮ, ಭಾರದ ಗುಂಡು ಎಸೆತ ಲಿವಿನ ದ್ವಿತೀಯ, 200 ಮೀ. ಓಟ ಮನೋಜ್ ದ್ವಿತೀಯ, 600 ಮೀ. ಮಿಥುನ್ ತೃತೀಯ ಸ್ಥಾನ, 100ಮೀ. ಓಟ ಆಶಿಕ್ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗ- ವಸತಿ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗಮಂಡಲದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿಯಲ್ಲಿ ಪ್ರಥಮ. ಥ್ರೋಬಲ್ ಪ್ರಥಮ, ವಾಲಿಬಾಲ್ ಪ್ರಥಮ, ಹ್ಯಾಂಡ್ ಬಾಲ್ ಪ್ರಥಮ, ಬಾಲಕಿಯರ ಕಬಡ್ಡಿ ದ್ವಿತೀಯ, ಥ್ರೋಬಾಲ್ ಪ್ರಥಮ, ಹ್ಯಾಂಡ್ ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ಚೇತನ್ 100 ಮೀ. ಓಟದಲ್ಲಿ ಪ್ರಥಮ, ಬಾರದ ಗುಂಡು ಎಸೆತ ಪ್ರಥಮ, ಭರ್ಜಿ ಎಸೆತ ಪ್ರಥಮ, ಕೇಶನ್ ಭಾರದ ಗುಂಡು ಎಸೆತ ದ್ವಿತೀಯ, 1500 ಮೀ. ಓಟ ಧ್ಯಾನ್ ಪ್ರಥಮ, ಪವನ್ ದ್ವಿತೀಯ, 800 ಮೀ. ಓಟ ಚಂದನ್ ಪ್ರಥಮ, 3000 ಮೀ. ಓಟ ಸಮರ್ಥ್ ಪ್ರಥಮ, ಬಿಪಿನ್ ದ್ವಿತೀಯ, 400 ಮೀ. ಓಟ ದೇವೇಂದ್ರ ತೃತೀಯ, 100 ಮೀ. ಓಟ ಗಗನ್ ತೃತೀಯ, ಶರಣ ಬಸವ 800 ಮೀ ಓಟ. ತೃತೀಯ. 4*100 ರಿಲೇ ದ್ವಿತೀಯ, 4*400 ರಿಲೇ ಪ್ರಥಮ. ಬಾಲಕಿಯರ ವಿಭಾಗದಲ್ಲಿ ಡಯಾನ ಡಿಸ್ಕಸ್ ಎಸೆತ ಪ್ರಥಮ, ಭಾರದ ಗುಂಡು ಎಸೆತ ತೃತೀಯ, ವರ್ಷಿಣಿ 100 ಮೀ. ಓಟ ತೃತೀಯ, 200 ಮೀ. ಪ್ರಥಮ. ಪುಷ್ಪಿತಾ 400 ಮೀ.ತೃತೀಯ, ಧನ್ಯ 3000 ಮೀಟರ್ ಪ್ರಥಮ.4*100 ರಿಲೇ ದ್ವಿತೀಯ, 4*400 ರಿಲೇ ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಪ್ರಾಂಶುಪಾಲರಾದ ಲೋಕೇಶ್, ನಿಲಯ ಪಾಲಕರಾದ ದೀಪಕ್ ಕೆ.ಕೆ., ದೈಹಿಕ ಶಿಕ್ಷಣ ಶಿಕ್ಷಕರಾದ ಪವನ್ ಸಾಗರ್ ಕೆ. ಪಿ.ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ಪೋಷಕರು ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.