ಸುಂಟಿಕೊಪ್ಪ ಸೆ.2 NEWS DESK : ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಕಚೇರಿಯನ್ನು ಸಂಭ್ರಮ ಗ್ರೂಪ್ಸ್ ಹಾಗೂ ಎ.ಬಿ.ಗ್ರೂಪ್ಸ್ ಸಹಕಾರದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ ಎಂದು ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ವಾಹನ ಚಾಲಕರ ಸಂಘದ ಕಚೇರಿಯಲ್ಲಿ ಕಾರ್ಯಚರಿಸುತ್ತಿದ್ದು ಕಚೇರಿ ಒಳಭಾಗವು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡ ಸಂಭ್ರಮ ಗ್ರೂಪ್ಸ್ ಹಾಗೂ ಎ.ಬಿ.ಗ್ರೂಪ್ಸ್‍ನ ಮಾಲೀಕರು ಆರ್ಥಿಕ ನೆರವು ನೀಡುವ ಮೂಲಕ ಕಚೇರಿಗೆ ನೆಲಹಾಸು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಅದೇ ರೀತಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್ ಕೇರಿಗೆ ಸಿ.ಸಿ.ಕ್ಯಾಮರ ಅಳವಡಿಸುವ ಮೂಲಕ ಸಂಘದ ಕಚೇರಿಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಕಿಟ್ಟಣ್ಣ ರೈ ಮಾಹಿತಿ ನೀಡಿದರು.









